ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಈಗಾಗಲೇ ಪ್ಲೇ ಆಫ್ ತಲುಪಿದ್ದು, ಉಳಿದ ಎರಡು ಸ್ಥಾನಗಳಿಗಾಗಿ ಬರೋಬ್ಬರಿ 5 ತಂಡಗಳು ಪೈಪೋಟಿ ನಡೆಸುತ್ತಿವೆ.
ಪ್ಲೇ ಆಫ್ಗೆ ಹೋಗಲು ಆರ್ಸಿಬಿ, ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ಸೇರಿದಂತೆ ಲಕ್ನೋ ಭಾರೀ ಸರ್ಕಸ್ ನಡೆಸುತ್ತಿವೆ. ನಾಳೆ ರೋಚಕ ಪಂದ್ಯ ನಡೆಯಲಿದ್ದು, ಚೆನ್ನೈ ವಿರುದ್ಧ ಆರ್ಸಿಬಿ ಗೆಲ್ಲಲೇಬೇಕಿದೆ. ಅದರಲ್ಲೂ ಆರ್ಸಿಬಿ 18 ರನ್ಗಳಿಂದ ಗೆಲ್ಲಬೇಕಿದೆ.
ಇನ್ನು, ಈ ಮಧ್ಯೆ ಆರ್ಸಿಬಿಗಿಂತಲೂ ಹೆಚ್ಚು ಪ್ಲೇ ಆಫ್ ಅವಕಾಶ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೆ ಎಂದು ಮಾಜಿ ಕ್ರಿಕೆಟರ್ಸ್ ಆದ ಇರ್ಫಾನ್ ಪಠಾಣ್, ಅಂಬಟಿ ರಾಯುಡು, ಮೊಹಮ್ಮದ್ ಕೈಫ್ ಮತ್ತು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ಗೆ ಹೋಗಲಿವೆ. ಆರ್ಸಿಬಿ ಅಲ್ಲ, ಚೆನ್ನೈ ಈ ಬಾರಿ ಪ್ಲೇ ಆಫ್ಗೆ ಹೋಗಲು ಏನಾದ್ರೂ ಮಾರ್ಗ ಕಂಡುಕೊಳ್ಳುತ್ತದೆ. ಅದು ಪರಂಪರೆಯ ತಂಡ ಎಂದಿದ್ದಾರೆ.