ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರ ಅಂತ್ಯವಾಗಿದೆ. ಈಗ ಧಾರಾವಾಹಿಯಿಂದ ಹೊರ ಬಂದ ಬಗ್ಗೆ ಸಂಜನಾ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಸಂಜನಾ ಹಂಚಿಕೊಂಡಿದ್ದಾರೆ.
ನಮಸ್ತೆ ಪ್ರಿಯರೇ ಎಲ್ಲಾ ನನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ಗಳ ಜತೆ ಒಂದು ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದ ಜತೆ ನನ್ನ ಪ್ರಯಾಣ ಕೂಡ ಎಂಡ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಮುಂದುವರಿದು, ಕಳೆದ 3 ವರ್ಷಗಳಿಂದ ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ಕಳೆದ ಮೂರು ವರ್ಷಗಳಿಂದಲೂ ನನ್ನ ವೃತ್ತಿ ಜೀವನದ ಭಾಗವಾಗಿತ್ತು. ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ನನ್ನನ್ನು ಸ್ನೇಹಾ ಆಗಿ ಆಯ್ಕೆ ಮಾಡಿದ್ದಕ್ಕಾಗಿ ಜೀ ವಾಹಿನಿ ಮತ್ತು ಪ್ರೊಡಕ್ಷನ್ ಹೌಸ್ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹಂಚಿಕೊಳ್ಳುತ್ತೇನೆ.
ಕೆಲವು ವೈಯಕ್ತಿಕ ಕಾರಣಿಗಳಿಗಾಗಿ ಹಾಗೂ ಬಂದು ನಿಂತಿರುವ ಕೆಲವು ಸವಾಲುಗಳನ್ನು ಎದುರಿಸಲು ನಾನು ಈ ಧಾರಾವಾಹಿಂದ ಹೊರಗೆ ಬರಲೇ ಬೇಕಾಗಿದೆ’ ಎಂದಿದ್ದಾರೆ. ಈ ಪ್ರಾಜೆಕ್ಟ್ನಲ್ಲಿನ ಈ ಪಾತ್ರಕ್ಕಾಗಿ ನಾನು ಪಡೆದ ಅಪಾರ ಪ್ರೀತಿ ಮತ್ತು ಮನ್ನಣೆಯು ನನಗೆ ಸಿಕ್ಕ ದೊಡ್ಡ ಪ್ರಶಸ್ತಿ. ಅದು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಹೆಚ್ಚಿನವರು ಪಾತ್ರವು ಸಾಯುವ ದೃಶ್ಯ ನೋಡಿ ದುಃಖಿತರಾಗಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳೋಣ. ಮುಂದಿನ ದಿನಗಳಲ್ಲಿ ಅಭಿಮಾನಿಗಳನ್ನು ಭಿನ್ನ ಪಾತ್ರದ ಮೂಲಕ ಭೇಟಿ ಆಗುವ ವಿಶ್ವಾಸ ನನಗೆ ಇದೆ.
ಸ್ವಲ್ಪ ಸಮಯದ ನಂತರ ವಿಭಿನ್ನ ಪಾತ್ರದ ಮೂಲಕ ಮತ್ತೆ ಬರುವೆ. ಕಳೆದ 3 ವರ್ಷಗಳಲ್ಲಿ ಕರ್ನಾಟಕ ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನನ್ನ ಮುಂದಿನ ಪ್ರಯತ್ನಗಳಿಗೂ ಇದೇ ರೀತಿಯ ಪ್ರೀತಿ, ಗೌರವ ಸಿಗುತ್ತದೆ ಎಂಬ ವಿಶ್ವಾಸ ನನಗೆ ಇದೆ. ನನ್ನ ವೈಯಕ್ತಿಕ ಮತ್ತು ವೃತ್ತಿಪರ ಪ್ರಗತಿಗೆ ಸಂಬಂಧಿಸಿದಂತೆ ಹೆಚ್ಚಿನ ಅಪ್ಡೇಟ್ವನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.