ಬೆಂಗಳೂರು: ಜೈನಮುನಿಗಳ ಕೊಲೆ ವಿಚಾರ ಗೊತ್ತಾಗಿ ನಿನ್ನೆ (ಜು.07) ರಂದು ಸದನದಲ್ಲಿ ಗೃಹಸಚಿವರ ಗಮನಕ್ಕೆ ತಂದಿದ್ದೆ. ಶ್ರೀಗಳದ್ದೇ ಈ ರೀತಿ ಕೊಲೆಯಾದರೇ ರಾಜ್ಯದ ಜನರ ಪರಿಸ್ಥಿತಿ ಏನು? ನಾಳೆ ಜನರಿಗೆ ಏನು ರಕ್ಷಣೆ ಕೊಡುತ್ತೀರಿ ನೀವು ಎಂದು ಗೃಹಸಚಿವರಿಗೆ ಕೇಳಿದ್ದೆ. ಆಗ ಇದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದು.
ಸೋಮವಾರ ಹೇಳಿಕೆ ಕೊಡೋದಾಗಿ ಗೃಹಸಚಿವರು ಹೇಳಿದ್ದಾರೆ ಎಂದು ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲಿ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರುನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈನ ಮುನಿಗಳು ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.