ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಪಕ, ನಿರೂಪಕ ಹಾಗೂ ನಟ ಕರಣ್ ಜೋಹರ್ ಎಲ್ಲರಿಗೂ ಚಿರಪರಿಚಿತ. ಯಾವುದೇ ಸೆಲೆಬ್ರಿಟಿಗಳ ವಿವಾಹವಾದರೂ ಕರಣ್ ಜೋಹರ್ ಇದ್ದೇ ಇರುತ್ತಾರೆ. ಅಷ್ಟರ ಮಟ್ಟಿಗೆ ಕರಣ್ ಎಲ್ಲರೊಂದಿಗೆ ಆಪ್ತತೆ ಹೊಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಕರಣ್ ಎಲ್ಲಿಯೂ ಕಾಣದೆ ಅಚ್ಚರಿ ಮೂಡಿಸಿದ್ರು. ಅಷ್ಟಕ್ಕೂ ಕರಣ್ ಅನಂತ್ ಅಂಬಾನಿ ಮದುವೆಯಲ್ಲಿ ಭಾಗಿಯಾಗದೆ ಇರಲು ಕಾರಣವೇನು ಗೊತ್ತಾ?
ಕರಣ್ ಜೋಹರ್ಗೆ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ಗೆ ಆಹ್ವಾನ ನೀಡಲಾಗಿತ್ತು. ಕರಣ್ ಜೋಹರ್ ಸಹ ಉತ್ಸುಕತೆಯಿಂದ ಪ್ರೀ ವೆಡ್ಡಿಂಗ್ಗೆ ಹಾಜರಾಗಲು ತಯಾರಿ ಆರಂಭಿಸಿದ್ದರು. ಪ್ರೀ ವೆಡ್ಡಿಂಗ್ಗಾಗಿ ವಿಶೇಷ ಧಿರಿಸುಗಳನ್ನು ಗೆಳೆಯ ಮನೀಷ್ ಮಲ್ಹೋತ್ರಾ ಅವರಿಂದ ಡಿಸೈನ್ ಮಾಡಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕರಣ್ ಜೋಹರ್ಗೆ ಅನಾರೋಗ್ಯ ಉಂಟಾದ ಕಾರಣ ಅವರು ಪ್ರೀ ವೆಡ್ಡಿಂಗ್ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.
ಕರಣ್ ಜೋಹರ್ಗೆ ವೈರಲ್ ಜ್ವರ, ನೆಗಡಿ ಮತ್ತು ಗಂಟಲು ನೋವುಗಳು ಕಾಣಿಸಿಕೊಂಡ ಕಾರಣ, ಇತರೆ ಅತಿಥಿಗಳಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಕರಣ್ ಜೋಹರ್ ಪ್ರೀ ವೆಡ್ಡಿಂಗ್ಗೆ ಹೋಗದಿರಲು ನಿರ್ಧರಿಸಿ ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆದುಕೊಂಡರು. ತಮ್ಮ ಗೆಳೆಯರಿಂದ ಪ್ರೀ ವೆಡ್ಡಿಂಗ್ ಸಂಭ್ರಮದ ಬಗ್ಗೆ ಕೇಳಿ ತಿಳಿದುಕೊಂಡರಂತೆ. ಅಲ್ಲದೆ, ಅನಂತ್ ಹಾಗೂ ರಾಧಿಕಾರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾವಪೂರ್ಣ ಸಂದೇಶವನ್ನು ಕರಣ್ ಬರೆದುಕೊಂಡಿದ್ದಾರೆ.