ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಪಟ್ಟಿಯಲ್ಲಿ ರೇಣುಕಾ ಸ್ವಾಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದಿರುವ ಮೆಸೇಜ್ ಸಂಭಾಷಣೆ ಬಹಿರಂಗವಾಗಿದೆ. ರೇಣುಕಾ ಸ್ವಾಮಿ, ಪವಿತ್ರಾಗೆ ಏನು ಮೆಸೇಜ್ ಮಾಡಿದ್ದ? ಅದಕ್ಕೆ ಪವಿತ್ರಾ ನೀಡಿದ್ದ ಪ್ರತಿಕ್ರಿಯೆ ಏನು? A1 ಆರೋಪಿ ಪವಿತ್ರಾಗೌಡ ಮತ್ತು ಕೊಲೆಯಾದ ರೇಣುಕಾಸ್ವಾಮಿ ನಡುವೆ ಇನ್ಸ್ಟಾಗ್ರಾಂ ಮೂಲಕ ನಡೆದಿ ಚಾಟಿಂಗ್ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಫೇಕ್ ಅಕೌಂಟ್ನಿಂದ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿ :
Goutham_KS_1990 ಎಂಬ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ ರೇಣುಕಾಸ್ವಾಮಿ ಪವಿತ್ರಗೌಡ್ಎ ಅಶ್ಲೀಲ ಮೆಸೇಜ್ ಮಾಡಿರುವ ವಿಚಾರ ರಿವೀಲ್ ಆಗಿದೆ. ಚಿತ್ರದುರ್ಗದಿಂದ ಅವನು ಕಿಡ್ನಾಪ್ ಆಗುವ 8 ದಿನಕ್ಕೂ ಮುನ್ನ ಪವಿತ್ರಾಗೌಡಳ ಅಧಿಕೃತ ಇನ್ಸ್ಟಾಗ್ರಾಂಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ.
ಮರ್ಮಾಂಗದ ಫೋಟೋ ಕಳುಹಿಸಿದ್ದ ಸ್ವಾಮಿ :
ನಟ ದರ್ಶನ್ರನ್ನು ಬಿಟ್ಟು ಬಂದು ನನ್ನ ಜೊತೆ ಇರು ಎಂದು ಪವಿತ್ರಾಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ಅಲ್ಲದೇ ಪವಿತ್ರಾಗೌಳ ಸೌಂದರ್ಯವನ್ನು ಅಶ್ಲೀಲವಾಗಿ ವರ್ಣಿಸಿ ಮೆಸೇಜ್ನಲ್ಲಿ ವರ್ಣಿಸಿದ್ದ. ನಾನು ನಿಮ್ಮ ಅಭಿಮಾನಿ ಎಂದೂ ಹೇಳಿದ್ದ ಸ್ವಾಮಿ, ಲೈಂಗಿಕ ಬಯಕೆ ಈಡೇರಿಸು ಬಾ ಎಂದೂ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದನಂತೆ. ಇದರೊಂದಿಗೆ ತನ್ನ ಮರ್ಮಾಂಗದ ಫೋಟೋವನ್ನೂ ಪವಿತ್ರಾಗೆ ಕಳುಹಿಸಿದ್ದ ಎಂದು ಚಾರ್ಜ್ಶೀಟ್ ಉಲ್ಲೇಖಿಸಲಾಗಿದೆ.
ಚಾಟಿಂಗ್ನಲ್ಲಿ ಏನಿದೆ?
ಜೂ.6ರಂದು ಪವಿತ್ರಾಗೌಡ ರೇಣುಕಾಸ್ವಾಮಿ ನಡುವೆ ಇನ್ಸ್ಟಾಗ್ರಾಂನಲ್ಲಿ ಚಾಟಿಂಗ್ ನಡೆದಿದೆ. ಹಾಯ್.. ಹಾಯ್ ಕಣೇ, ಗುಡ್ನೈಟ್ ಸ್ವೀಟ್ ಡ್ರೀಮ್ಸ್ ಕಣೇ, ನೀನು ಏನ್ ಎಕ್ಸ್ಪೆಕ್ಟ್ ಮಾಡ್ತೀಯಾ… ನಂದು ನೋಡ್ತಿಯಾ ಹೇಳು ಕಳಿಸ್ಲಾ? ನೀನು ಹಾಟ್ ಅಂಡ್ ಸೆಕ್ಸಿ, ಸಖತ್ ಫಿಗರ್ ಕಣೇ, ನಿನಗೆ ಫ್ಯಾನ್ ಆಗಿಬಿಟ್ಟೆ ನಾನು. ಬಾ ಉ*ಕ್ಕೆ*ವು ಹಾ*ನಿ…ರೇಣುಕಾಸ್ವಾಮಿಯ ಈ ಎಲ್ಲಾ ಮೆಸೇಜ್ ನಂತರ ಪವಿತ್ರಾಗೌಡ ನಿನ್ನ ನಂಬರ್ ಕಳುಹಿಸು ಎಂದು ಪ್ರತಿಕ್ರಿಯಿಸಿ.
ವಾಟ್ಸಪ್ ಮೂಲಕ ಶುರುವಾಯಿತು ಮೆಸೇಜ್:
ರೇಣುಕಾಸ್ವಾಮಿ ಕೊಲೆ ಕೇಸ್ನ ಇನ್ನೋರ್ವ ಆರೋಪಿ ಪವನ್ಗೆ ಪವಿತ್ರಾಗೌಡ ರೇಣುಕಾಸ್ವಾಮಿ ತನಗೆ ಮೆಸೇಜ್ ಮಾಡುತ್ತಿದ್ದ ವಿಚಾರ ಪವನ್ ಗಮನಕ್ಕೆ ತಂದಿದ್ದಾಳೆ. ಆಗ ಪವನ್, ರೇಣುಕಾಸ್ವಾಮಿ ನಂಬರ್ ಪಡೆದು ವಾಟ್ಸಾಪ್ ಮೂಲಕ ತಾನೇ ಪವಿತ್ರಾ ಗೌಡ ಎಂಬಂತೆ ರೇಣುಕಾಸ್ವಾಮಿ ಜತೆ ಚಾಟಿಂಗ್ ಮುಂದುವರಿಸಿದ್ದ ಎಂಬ ವಿಚಾರ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಜೂ.7ರಂದು ಪವನ್, ಪವಿತ್ರಾಗೌಡ ಹೆಸರಲ್ಲಿ ರೇಣುಕಾಸ್ವಾಮಿಗೆ ಚಾಟ್ ಮಾಡಿ, ನೀನು ಮನೆಯಲ್ಲಿ ಇರ್ತೀಯಾ? ಎಂದು ಪವನ್ ಕೇಳಿದ್ದಾನೆ. ನಿನಗೆ ನಾನು ಬೇಕು ಅಂದರೆ ನೀನು ನನ್ನ ಜತೆ ಪ್ರತಿನಿತ್ಯ ಮಾತನಾಡುತ್ತೀಯಾ ಎಂದು ರೇಣುಕಾಸ್ವಾಮಿ ರೀಪ್ಲೈ ಮಾಡಿದ್ದಾನೆ. ನೀನು ಮನೆಯಲ್ಲಿ ಇದಿಯಾ ಇಲ್ಲ ನಿನ್ನ ಶಾಪ್ ನಲ್ಲಿ. ಶಾಪ್ನಲ್ಲಿದ್ದರೆ ಹೊರಗಡೆ ಫೋಟೋ ಕಳುಹಿಸು ಎಂದು ಪವನ್ ಪವಿತ್ರಾಗೌಡ ಹೆಸರಲ್ಲಿ ಮೆಸೇಜ್ ಮಾಡಿದ್ದಾನೆ.
ಫೋಟೋ ಯಾಕೆ ಬೇಕು ಅಂತಾ ರೇಣುಕಾಸ್ವಾಮಿ ಕೇಳಿದ್ದಾನೆ. ಫೋಟೋ ಸೆಂಡ್ ಮಾಡಬೇಕು. ನೀನು ಸುಮ್ಮನೇ ಸುಳ್ಳು ಹೇಳುತ್ತಿಯಾ ಅಂತಾ ಡೌಟಿತ್ತು ಅಂತಾ ಪವನ್ ಚಾಟ್ ಮಾಡಿದ್ದಾನೆ. ಇಲ್ಲಿಯವರೆಗೂ ಪವಿತ್ರಾ ಗೌಡ ಭಾವಿಸಿಯೇ ರೇಣುಕಾಸ್ವಾಮಿ ಮೆಸೇಜ್ ಮಾಡುತ್ತಲೇ ಬಂದಿದ್ದ. ಮದರ್ ಪ್ರಾಮಿಸ್ ನಾನು ಡ್ಯೂಟಿಯಲ್ಲಿ ಇದ್ದೀನಿ ಕಣೆ.. ಆಯ್ತಾ? ಎಂದು ರೇಣುಕಾಸ್ವಾಮಿ ಹೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಪವನ್ ನಿಜ ಅನಿಸುತ್ತಿಲ್ಲ ಕಣೋ…. ಬಳಿಕ ರೇಣುಕಸ್ವಾಮಿ ಫೋಟೋ ಸೆಂಡ್ ಮಾಡಿದ್ದಾನೆ. ಇದೀಗ ಓಕೆ ನಿಜ ಬಿಡು…ಎಂದು ಪವಿತ್ರಾ ಸೋಗಿನಲ್ಲಿ ಪವನ್ ರೀಪ್ಲೈ ಕೊಟ್ಟಿದ್ದಾನೆ. ಇದಾದ ಬಳಿಕ ರೇಣುಕಾಸ್ವಾಮಿ ಮರ್ಮಾಂಗದ ಫೋಟೋ ಕಳುಹಿಸಿ ಇದು ಬೇಕಾ ನಿನಗೆ ಎಂದಿದ್ದಾನೆ. ಪವಿತ್ರಾ ಹೆಸರಲ್ಲಿ ಪವನ್ ಬೇಕು…ಬೇಕು..ಎಂದಿದ್ದಾನೆ. ಬಳಿಕ ರೇಣುಕಾಸ್ವಾಮಿ ನ್ಯೂ ಓಂಕಾರ್ ಫ್ಯಾಕ್ಟರಿ ಹತ್ತಿರ ಇರುವುದಾಗಿ ಅಂತಾ ಪ್ರತಿಕ್ರಿಯೆ ನೀಡಿದ್ದಾನೆ.
ತಿಂಗಳಿಗೆ ರೂ.10 ಸಾವಿರ ಕೊಡ್ತೀನಿ ಕಣೇ:
ನನ್ನ ಜೊತೆ ಸೀಕ್ರೆಟ್ ಆಗಿ ಲಿವ್ ಇನ್ ರಿಲೇಶನ್ಶಿಪ್ ಮಾಡ್ತೀಯಾ ಹೇಳು ಪ್ಲೀಸ್. ನಿನಗೆ ತಿಂಗಳಿಗೆ ರೂ.10 ಸಾವಿರ ಕೊಡ್ತೀನಿ ಅಂತಲೂ ರೇಣುಕಾಸ್ವಾಮಿ ವಾಟ್ಸಾಪ್ ಚಾಟ್ ಮಾಡಿದ್ದಾನೆ. ಇದಕ್ಕೆ ಪವಿತ್ರಾಗಡ ಹೆಸರಲ್ಲಿ ಪವನ್ ರೀಪ್ಲೈ ಮುಂದುವರಿಸಿ.. ಓಕೆ.. ಆದರೆ ನೀನು ನಾನು ಕರೆದಾಗ ಬರುತ್ತಿಯಾ? ಅದಕ್ಕೆ ರೇಣುಕಾಸ್ವಾಮಿ ನಿನಗೋಸ್ಕರ ಬರ್ತಿನಿ ಕಣೆ ಆಯ್ತಾ. ನಾನು ಇರುವುದು ದುರ್ಗ ಕಣೆ ಎಂದಿದ್ದಾನೆ. ಯಾವಾಗ ಬೆಂಗಳೂರಿಗೆ ಬರ್ತಿಯಾ ಹೇಳು ಅಂತಾ ಪವನ್ ಕೇಳಿದ್ದಾನೆ ಎಂಬುವುದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ದರ್ಶನ್ ಮಾಹಿತಿ ನೀಡಿದ ಪವನ್ :
ರೇಣುಕಾಸ್ವಾಮಿಯ ದುರ್ವವರ್ತನೆ ಪವಿತ್ರಾ ಗೌಡ ತನ್ನ ಮ್ಯಾನೇಜರ್ ಪವನ್ಗೆ ಹ್ಯಾಂಡಲ್ ಮಾಡಲು ತಿಳಿಸಿದ್ದಳು. ಬಳಿಕ ಪವನ್ ಪವಿತ್ರಾ ತನ್ನ ಹೆಸರಿನಲ್ಲಿ ರೇಣುಕಾಸ್ವಾಮಿಗೆ ಮಸೇಜ್ ಮಾಡಿ, ಆತನಿಂದ ಎಲ್ಲ ಮಾಹಿತಿ ಪಡೆದು ಈ ಸಂಗತಿ ನಟ ದರ್ಶನ್ಗೆ ತಿಳಿಸಿದ್ದಾನೆ.
ಬಳಿಕೆ ಚಿತ್ರದುರ್ಗದ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಆರೋಪಿ ರಾಘವೇಂದ್ರಗೆ ತಿಳಿಸಿದ್ದು, ಆತ ಒಂದು ತಂಡ ಕಟ್ಟಿಕೊಂಡು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಬೆಂಗಳೂರಿನ ಆರ್ಆರ್ ನಗರದ ಪಟ್ಟಣಗೆರೆ ಶೆಡ್ಗೆ ಕರೆತಂದಿದ್ದಾನೆ. ಇಲ್ಲಿ ಕರೆತಂದಾಗಿ ದರ್ಶನ್ ಪವಿತ್ರಾ ಗೌಡ ಮನೆಗೆ ತೆರಳಿ, ಆಕೆಯನ್ನು ತನ್ನ ಜತೆ ಕರೆದುಕೊಂಡು ಪಟ್ಟಣಗೆರೆ ಶೆಡ್ ಗೆಬಂದಿದ್ದಾನೆ.
ಶೆಡ್ನಲ್ಲಿ ರೇಣುಕಾಸ್ವಾಮಿ ಈಗಗಾಲೇ ಡಿ ಗ್ಯಾಂಗ್ನಿಂದ ಥಳಿತಕ್ಕೆ ಒಳಗಾಗಿದ್ದ ಕಾರಣ ಮುಖಕ್ಕೆ ರಕ್ತದ ಗಾಯಗಳಾಗಿದ್ದವು. ಶೆಡ್ಗೆ ದರ್ಶನ್, ಪವಿತ್ರಾಗೌಡ ಬರುತ್ತಿದ್ದಂತೆ ಅವನನ್ನು ನೋಡುತ್ತಿದ್ದಂತೆ ಕೆರಳಿದ ಪವಿತ್ರಾ, ಅವನನ್ನ ಬಿಡಬೇಡಿ… ಸರಿಯಾಗಿ ಪಾಠ ಕಲಿಸಿ… ಇವನಂಥವರು ಈ ಭೂಮಿ ಮೇಲೆಯೇ ಇರಬಾರದು ಎನ್ನುತಲೇ ರೇಣುಕಾಸ್ವಾಮಿ ಮೇಲೆ ತನ್ನ ಚಪ್ಪಲಿಯಿಂದ ಥಳಿಸಿದಳು. ಪವಿತ್ರಾಳ ಮಾತಿನಿಂದ ಪ್ರಚೋದನೆಗೊಂಡ ದರ್ಶನ್ & ಗ್ಯಾಂಗ್ ಮೃಗಗಳಂತೆ ಎಗರಿ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಂದಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.