ಬೆಂಗಳೂರು: ಹೊಸವರ್ಷಾಚರಣೆಗೆ ಕ್ಷಣಗಣನೇಶುರುವಾಗಿದೆ 2023 ಕ್ಕೆ ಬಾಯ್…ಬಾಯ್ ಹೇಳಿ 2024 ಹಾಯ್ ಹೇಳೋ ಕೇ ಕೆಲವೇ ದಿನಗಳು ಇದ್ದು ಬೆಂಗಳೂರಿನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಕಲರ್ ಫುಲ್ ಹೊಸವರ್ಷಾಚರಣೆಗೆ ಯಾವುದು ಹಿತ ಯಾವುದು ಅಹಿತ ಅನ್ನೋದನ್ನು ಪರಿಗಣಿಸಿ ಮಾರ್ಗಸೂಚಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದು ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ…
ಈ ಬಾರಿ ಸಿಲಿಕಾನ್ ಸಿಟಿಯ ಜನರು ಜಗತ್ತಿನ ಯಾವುದೇ ಭಾಗಕ್ಕಿಂತಲೂ ಕಡಿಮೆಯಿಲ್ಲದಂತೆ ನೂತನ ವರ್ಷವನ್ನು ಬರಮಾಡಿಕೊಳ್ಳಲಿದ್ದಾರೆ.. ಡಿ ಸೆಂಬರ್ 31 ರಾತ್ರಿ ಜಗಮಗಿಸೋ ಬೆಳಕಿನ ಕಲರವದ ನಡುವೆ ಸಹಸ್ರಾರು ಜನ 2024ರ ಆಗಮನಕ್ಕೆ ಸ್ವಾಗತ ಕೋರಲಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆಗೆ ಬೆಂಗಳೂರು ಸಾಕ್ಷಿಯಾಗ ದಿರಲಿ ಎಂದು ನಗರ ಪೊಲೀಸ್ ಆಯುಕ್ತರು ಗೈಡ್ ಲೈನ್ ಬಿಡುಗಡೆ ಮಾಡಿದಾರೆ.
ಬೆಂಗಳೂರಿನಲ್ಲಿ ನೂತನ ವರ್ಷದ ಸಂಭ್ರಮ ಆಚರಿಸುವ ಪ್ರಮುಖ ರಸ್ತೆಗಳು ಅಂದ್ರೆ ಅದು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ , ರಿಜ್ಮಂಡ್ ರಸ್ತೆ, ಕಬ್ಬನ್ ರಸ್ತೆ, ಟ್ರಿನಿಟಿ ರಸ್ತೆ , ಫೀನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಪಬ್ ಗಳು ಕ್ಲಬ್ ಗಳು.. ಇಲ್ಲಿ ಜನಸಂದಣಿ ಹೆಚ್ಚಾಗಿರಲಿದ್ದು ಇಲ್ಲಿ ಮಹಿಳೆಯರ ಸುರಕ್ಷತೆಗಾಗಿ ಐಲ್ಯಾಂಡ್ ನಿರ್ಮಾಣವಾಗಲಿದೆ. ಇನ್ನು ಕೆಲವು ಸ್ಥಳಗಳಲ್ಲಿ ಪೊಲೀಸ್ ಕಿಯೋಸ್ಕ್ ಗಳನ್ನು ತೆರೆಯಲಾಗುತ್ತಿದ್ದು ಮಕ್ಕಳು ಕಾಣೆಯಾದಲ್ಲಿ , ಯಾವುದೇ ರೀತಿಯ ಕಳುವಿನ ದೂರುಗಳು ಇನ್ನಿತರ ತುರ್ತಿ ಸಂಧರ್ಭದಲ್ಲಿ ಅವಶ್ಯಕ ಸೇವೆಯನ್ನು ಪಡೆಯಬಹುದಾಗಿದೆ.
ಡಿಸೆಂಬರ್ 31 ರಾತ್ರಿ ಎಂಜಿರಸ್ತೆಯ ಮೆಟ್ರೋ ನಿಲ್ದಾಣದ ಬಳಿನೂಕು ನುಗ್ಗಲು ಉಂಟಾಗುವ ಸಾಧ್ಯತೆಗಳಿರುವ ಕಾರಣ ರಾತ್ರಿ 11 ರಿಂದ 2ಗಂಟೆಯವೆಗೂ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣ ಬಂದ್ ಆಗಲಿದೆ. ಕಬ್ಬನ್ ಪಾರ್ಕ್ ನಿಲ್ದಾಣ ಪರ್ಯಾಯವಾಗಿ ಬಳಕೆಯಾಗಲಿದೆ. ಇನ್ನು ವೀಲಿಂಗ್ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕುವ ಸಲುವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಫ್ಲೈಓವರ್ ಹೊರತು ನಗರ ಎಲ್ಲಾ ಫ್ಲೈ ಓವರ್ ಗಳನ್ನು ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೂ ಸಂಪೂರ್ಣ ಬಂದ್ ಮಾಲಿದ್ದಾರೆ.. ಭಾರೀ ವಾಹನಗಳನ್ನು ಒಂದು ದಿನ ಮುಂಚಿತವಾಗಿಯೇ ನಗರ ಪ್ರವೇಶ ನಿಷೇಧಿಸಲಾಗಿದೆ..