ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಆಧ್ಯತ್ಮದ ಬಗ್ಗೆ, ಆಧ್ಯಾತ್ಮಿಕ ಆಲೋಚನೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕಂಗನಾಗೆ ಆಧ್ಯಾತ್ಮ ಗುರು ಜಗ್ಗಿ ವಾಸುದೇವ ಅವರ ಬಗ್ಗೆ ವಿಶೇಷ ಗೌರವ ಇದೆ. ಮಿದುಳಿನಲ್ಲಿ ರಕ್ತಸಾವ್ರ ಉಂಟಾಗಿದ್ದರಿಂದ ಸದ್ಗುರು ಇತ್ತೀಚೆಗೆ ಮಿದುಳಿನ ಸರ್ಜರಿಗೆ ಒಳಗಾದರು. ಈ ಸುದ್ದಿ ತಿಳಿದ ಕಂಗನಾ ಕುಗ್ಗಿ ಹೋದರಂತೆ. ತಾವು ಒಂದು ಕ್ಷಣ ಮಂಕಾಗಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.
‘ಇಂದು ನಾನು ಸದ್ಗುರು ಅವರನ್ನು ಐಸಿಯು ಬೆಡ್ ಮೇಲೆ ಮಲಗಿರುವುದನ್ನು ನೋಡಿದೆ. ಈ ಮೊದಲು ಅವರು ನಮ್ಮಂತೆ ಮೂಳೆಗಳು, ರಕ್ತ, ಮಾಂಸ ಹೊಂದಿದ್ದಾರೆ ಎಂದು ನನಗೆ ಎಂದಿಗೂ ಅನಿಸಿರಲಿಲ್ಲ. ದೇವರೆ ಕುಸಿದಂತೆ ಭಾಸವಾಯಿತು. ಭೂಮಿ ಪಲ್ಲಟಗೊಂಡಿತೇನೋ ಅನಿಸಿತು. ಆಕಾಶವು ನನ್ನನ್ನು ಕೈಬಿಟ್ಟಿದೆ ಎಂದು ಭಾಸವಾಯಿತು. ನನ್ನ ತಲೆ ತಿರುಗುತ್ತಿದೆ ಎಂದು ನನಗೆ ಅನಿಸಿತು. ನಾನು ಈ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎನಿಸಿತು. ಇದನ್ನು ನಂಬಬಾರದು ಎಂದುಕೊಂಡೆ. ನಂತರ ಕಣ್ಣೀರು ಬಂತು’ ಎಂದಿದ್ದಾರೆ ಕಂಗನಾ.
‘ನನ್ನ ನೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಇಂದು ಲಕ್ಷಾಂತರ ಭಕ್ತರು ನನ್ನ ಈ ದುಃಖವನ್ನು ಹಂಚಿಕೊಳ್ಳುತ್ತಾರೆ. ಅದನ್ನು ತಡೆದುಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರು ಆರೋಗ್ಯವಾಗಿ ಇರಲಿದ್ದಾರೆ. ಹಾಗಾಗದೇ ಇದ್ದಲ್ಲಿ ಸೂರ್ಯ ಉದಯಿಸುವುದಿಲ್ಲ, ಭೂಮಿ ಚಲಿಸುವುದಿಲ್ಲ. ಈ ಕ್ಷಣವು ನಿರ್ಜೀವ ಮತ್ತು ನಿಶ್ಚಲ ಎನಿಸುತ್ತದೆ’ ಎಂದಿದ್ದಾರೆ ಕಂಗನಾ.
ಸದ್ಗುರು ತಂಡದವರು ಬುಧವಾರ (ಮಾರ್ಚ್ 20) ಅವರ ಶಸ್ತ್ರಚಿಕಿತ್ಸೆ ವಿಚಾರವನ್ನು ತಿಳಿಸಿದ್ದಾರೆ. ಅವರಿಗೆ ನಿರಂತರವಾಗಿ ತಲೆನೋವು ಬರುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದ್ದು ಈ ವೇಳೆ ರಕ್ತಸ್ತ್ರವಾವಾಗಿರುವುದು ತಿಳಿದು ಬಂದಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಹಾರೈಸಿದ್ದಾರೆ.