ಬೆಂಗಳೂರು: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರನ್ನು ನಾನು ಮೊದಲ ಬಾರಿ ನೋಡಿದಾಗ ಯಾರೋ ಹುಚ್ಚ ಇರಬೇಕು ಎಂದುಕೊಂಡಿದ್ದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪರಿಶ್ರಮ ನೀಟ್ ಅಕಾಡೆಮಿಯ ಸಮಾರಂಭದಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್ ನಾಯಕರಾದ ಶಿವಶಂಕರ್ ಅವರು ಪ್ರದೀಪ್ ಈಶ್ವರ್ ಅವರನ್ನು ಅದೊಂದು ದಿನ ನನ್ನ ಬಳಿಗೆ ಕರೆದುಕೊಂಡು ಬಂದಿದ್ದರು.
ನಾನು ಪ್ರದೀಪ್ ಅವರ ಗಡ್ಡ, ಕೆದರಿದ ತಲೆಗೂದಲು ನೋಡಿ ಯಾರೋ ಹುಚ್ಚನನ್ನು ಕರೆದುಕೊಂಡು ಬಂದಿದ್ದೀರಿ ಎಂದು ಕೇಳಿಬಿಟ್ಟಿದ್ದೆ ಎಂದು ಜ್ಞಾಪಿಸಿಕೊಂಡರು. ನನ್ನ ಮಾತಿಗೆ ಉತ್ತರಿಸಿದ್ದ ಶಿವಶಂಕರ್, “ಆತ ಹುಚ್ಚನಲ್ಲ. ಬುದ್ಧಿವಂತ. ನಮ್ಮ ಪಕ್ಷಕ್ಕೆ ಉಪಯೋಗ ಆಗುತ್ತಾನೆ.
ತೂಕ ಕಡಿಮೆ ಮಾಡಿಕೊಳ್ಳುವಾಗ ಮೀನು ಮತ್ತು ಚಿಕನ್ʼಗಳಲ್ಲಿ ಯಾವುದು ಒಳ್ಳೆಯದು..? ಇಲ್ಲಿದೆ ನೋಡಿ
ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಕೇಳಿದ್ದರು. ಆಗ, ನಾನು ಅವರಿಗೆ ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಕೊಡಲು ನಿರ್ಧರಿಸಿದ್ದೆ. ನಾನು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಅವರು, ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವಿಧಾನಸಭೆಯಲ್ಲಿ ತಮ್ಮದೇ ಆದ ವಿಚಾರಗಳನ್ನು ಸದನದ ಮುಂದಿಡುತ್ತಿದ್ದಾರೆ” ಎಂದು ಹೊಗಳಿದರು.