ಬೆಂಗಳೂರು: ಎಲ್ಲಾ ಸಮುದಾಯದ ಜನಗಣತಿ ಆಗಬೇಕು. ಜಾತಿಯೂ ಸೇರಿದಂತೆ ಮೇಲೆತ್ತಬೇಕು ಆ ಬದ್ಧತೆ ನಮಗಿದೆ ಹಾಗಾಗಿ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷ ಜಾತ್ಯತೀತ ಅಂತ ಕರೆಯುವ ಪಕ್ಷಕ್ಕೆ ಜಾತಿಗಳ ಮೇಲೆ ಪ್ರತಿ ಬರುತ್ತದೆ. ಚುನಾವಣೆ ಹತ್ತಿರ ಬಂದಾಗ ಜಾತಿ ಸಮಾವೇಶ, ಸುಳ್ಳು ಆಶ್ವಾಸನೆ ಕೊಡುವುದು ಮಾಡುತ್ತಾರೆ.
2017 ರಲ್ಲಿ ಸಿದ್ದರಾಮಯ್ಯ ಅವರು ಎಲ್ಲ ಜಾತಿಗಳ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಮಾಡಲು ಸೂಚಿಸಿದ್ದರು. ಅವರ ಉದ್ದೇಶ ಬೇರೆ ಇತ್ತು. ಜಾತಿ ಗಣತಿ ಮಾಡುವ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿದೆ ಅದನ್ನು ತಪ್ಪಿಸಲು ಇವರು ಶೈಕ್ಷಣಿಕ, ಸಾಮಾಜಿಕ ಅಧ್ಯಯನ ಅಂತ ಹೇಳಿ ಉದ್ದೇಶ ಒಂದು ಆದೇಶ ಒಂದು ಆಗಿರುವುದರಿಂದ ಈ ಗೊಂದಲ ಸೃಷ್ಟಿಯಾಯಿತು.