ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮೀ ಯೋಜನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ನ ಹೈಕಮಾಂಡ್ ನಾಯಕರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆ್ಯಪ್ ಮೂಲಕ ನೋಂದಣಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು 1 ಕೋಟಿ 20 ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗಲಿದೆ. ಯೋಜನೆಯ ಅನುಷ್ಠಾನ , ರಿಜಿಸ್ಟ್ರೇಶನ್, ಸರ್ಕಾರ ಕೈಗೊಂಡಿರುವ ಕ್ರಮಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ…..
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯೋಜನೆ ಅನುಷ್ಠಾನದ ಮಾಹಿತಿ ನೀಡಿದ್ರು. ನಮ್ಮ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಕಡೆಯಿಂದ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಮಾಡಿಸಲು ನಿರ್ಧರಿಸಿದ್ದೊ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನ ಅರ್ಪೋಚ್ ಮಾಡಿದ್ದೊ ಆದ್ರೆ ಅವರು ಸಮಯದ ಕೊರತೆಯಿಂದ ಬರ್ತಿಲ್ಲ. ಆದ್ರಿಂದ ಸಿಎಂ ಸಿದ್ದರಾಮಯ್ಯ ಜುಲೈ 19 ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆ್ಯಪ್ ಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ರು…
1 ಕೋಟಿ 20 ಲಕ್ಷ ಮಹಿಳೆಯರಿಗೆ ತಲುಪಲಿದೆ. ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು, ಕುಟುಂಬ ಯಜಮಾನಿ ಅಥವಾ ಯಜಮಾನಿ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ರೆ ಅವರಿಗೆ ಗೃಹಲಕ್ಷ್ಮೀ ಸಿಗಲ್ಲ. . ಕರ್ನಾಟಕ ಓನ್, ಬೆಂಗಳೂರು ಓನ್ , ಗ್ರಾಮ ಒನ್, ಬಾಪೂಜಿ ಕೇದ್ರದಲ್ಲಿ ಆ್ಯಪ್ ಮೂಲಕ ನೋಂದಣಿ ಮಾಡಲಾಗುತ್ತದೆ. ಫಲಾನುಭವಿಗಳ ಮೊಬೈಲ್ ಗೆ SMS ಬಂದ ಬಳಿಕ ನೊಂದಣಿ ನೋಂದಣಿ ಕೇಂದ್ರಕ್ಕೆ ಹೋಗಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಹಳ್ಳಿಗಳಲ್ಲಿ
ಪ್ರಜಾ ಪ್ರತಿನಿಧಿ ಅಂತ ಸ್ವಯಂ ಸೇವಕರನ್ನು ಸಹ ನೋಂದಣಿಗೆ ನೇಮಕ ಮಾಡಲಾಗಿದ್ದು ಅವರು ಮನೆ ಬಳಿಯೇ ಹೋಗಿ ನೋಂದಣಿ ಮಾಡ್ತಾರೆ. ಯಾವುದೇ ಸಮಸ್ಯೆ ದೂರು ಇದ್ದರೆ ಟೋಲ್ ಫ್ರೀ ನಂಬರ್ ಗೆ 1902 ಅಥವಾ 8147500500 ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಯೋಜನೆಗೆ ಯಾವುದೇ ಕಾಲ ಮಿತಿ ಇಲ್ಲ ಇದು ನಿರಂತರ ಪ್ರಕ್ರಿಯೆ, ಆಗಸ್ಟ್ 16 ರಂದು ಡಿಡಿಟಿ ಮೂಲಕ 2 ಸಾವಿರ ಹಣವನ್ನು ನೇರವಾಗಿ ಅಕೌಂಟ್ ಗೆ ಹಾಕ್ತೀವಿ ಎಂದು ತಿಳಿಸಿದ್ರು ಸಚಿವೆ ಹೆಬ್ಬಾಳ್ಕರ್.
ಒಟ್ನಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮೀಯೋಜನೆಗೆ ಜುಲೈ 19ರಂದು ರಾಜ್ಯಾದ್ಯಂತ ಚಾಲನೆ ಸಿಗ್ತಿದೆ. ಸರ್ವರ್ ಸಮಸ್ಯೆ, ಯಾವುದೇ ಗೊಂದಲಗಳಾಗದಂತೆ ಕ್ರಮಕೈಗೊಂಡು ಮಹಿಳೆಯರಿಗೆ ಯೋಜನೆ ತಲುಪಿಸ್ತೀವಿ ಅನ್ನೋ ಆತ್ಮವಿಶ್ವಾಸದಲ್ಲಿದೆ ಸರ್ಕಾರ. ಗೃಹ ಲಕ್ಷ್ಮೀಯರು ಜಣ- ಜಣ ಕಾಂಚಾಣ ಪಡೆಯಲು ಉತ್ಸುಕರಾಗಿದ್ದಾರೆ.