ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಾರ್ವಜನಿಕರನ್ನ ತಲುಪುವ ಪ್ರಯತ್ನದಲ್ಲಿ ಹರಿಯಾಣದ ಸೋನಿಪತ್ನ ರೈತ ಮಹಿಳೆಯರೊಂದಿಗೆ (Farmer Womens) ಸಂವಾದದಲ್ಲಿ ನಿರತರಾಗಿದ್ದಾರೆ. ಅವರೊಂದಿಗಿನ ಸಂಭಾಷಣೆಯ ವೀಡಿಯೊಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಹಿಳೆಯರ (Womenʼs) ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ (Sonia Gandhi), ತಮ್ಮ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರೈತ ಮಹಿಳೆಯರನ್ನ ಪ್ರಿಯಾಂಕಾ ಗಾಂಧಿ (Priyanka Gandhi) ಮನೆಗೆ ಆಹ್ವಾನಿಸಿ, ಸೋನಿಯಾ ಗಾಂಧಿ ಜೊತೆಗೆ ಭೋಜನಕ್ಕೆ ವ್ಯವಸ್ಥೆ ಮಾಡಿದ್ದರು.
ಹೀಗೆ ಮನೆಗೆ ಬಂದ ರೈತ ಮಹಿಳೆಯರ ಪೈಕಿ ಓರ್ವ ಮಹಿಳೆ ರಾಹುಲ್ ಗಾಂಧಿ ಅವರ ಮದುವೆ ಯಾವಾಗ? ಮಾಡಲಿದ್ದೀರಿ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಸೋನಿಯಾ ಗಾಂಧಿ ʻನೀವೆ ಹುಡುಗಿಯನ್ನ ಹುಡುಕಿ..ʼ ಎಂದು ಚಟಾಕಿ ಹಾರಿಸಿದ್ದಾರೆ. ರಾಹುಲ್ ಗಾಂಧಿ ಹಂಚಿಕೊಂಡಿರುವ ಈ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಔತಣ ಕೂಟದ ವೇಳೆ ಮಹಿಳೆಯರ ಜೊತೆಗೆ ಆಹಾರ, ಮಹಿಳಾ ಸಬಲೀಕರಣ ಮತ್ತು GST ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಸರ್ಕಾರ ನನ್ನ ಮನೆಯನ್ನು ಕಿತ್ತುಕೊಂಡ ಹಿನ್ನಲೆ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಆಹ್ವಾನಿಸಿದ್ದೇನೆ ಎಂದು ಹೇಳಿದರು. ವೀಡಿಯೊದಲ್ಲಿ, ರಾಹುಲ್ ಗಾಂಧಿ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದಾರೆ. ನಿಮಗೆ ಊಟ ಇಷ್ಟವಾಯಿತೇ ಎಂದು ಕೇಳುತ್ತಿದ್ದಾರೆ. ಎಲ್ಲರಿಗೂ ಸಿಹಿತಿಂಡಿಗಳಿವೆಯೇ ಎಂದು ವಿಚಾರಿಸಿತ್ತಿದ್ದಾರೆ. ಮಕ್ಕಳು ಮತ್ತು ಹುಡುಗಿಯರಿಗೆ ಚಾಕೊಲೇಟ್ಗಳನ್ನು ವಿತರಿಸುವುದನ್ನು ಸಹ ಕಾಣಬಹುದು.