ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿಒಂದಾದ ಗೃಹಲಕ್ಷ್ಮೀ ನಿಲ್ಲುವುದಿಲ್ಲ. ಬದಲಿಗೆ ಈ ಯೋಜನೆಯಡಿ ಮಾರ್ಚ್ ನಂತರ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನೂ ಪರಿಗಣಿಸಲು ಸರಕಾರ ನಿರ್ಧರಿಸಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆಗೆ ಮುನ್ನ ಮತ್ತು ನಂತರ ಅರ್ಜಿ ಸಲ್ಲಿಸಿದವರನ್ನೂ ಗೃಹಕ್ಷ್ಮಿ ಯೋಜನೆಗೆ ಪರಿಗಣಿಸಲಾಗುತ್ತಿದೆ.
ಈ ಅವಧಿಯಲ್ಲಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಯೋಜನೆಗೆ ಬಿಪಿಎಲ್, ಎಪಿಎಲ್ ಪಡಿತರ ಹೊಂದಿರುವವರು ಎಂಬ ಭೇದ-ಭಾವವಿಲ್ಲದೆ ಎರಡೂ ವರ್ಗದ ಕಾರ್ಡ್ದಾರರನ್ನು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆ ಪಾವತಿದಾರರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ. ಆದರೂ ಆದಾಯ ತೆರಿಗೆ ಪಾವತಿಸುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದರು. ಇಂತಹ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ.
ಆದಾಯ ತೆರಿಗೆ ಪಾವತಿಸುತ್ತಿಲ್ಲವೆಂದು ಹಲವರು ಹೇಳುತ್ತಿದ್ದಾರೆ. ಇಂತಹವರಿಗೆ ಆದಾಯ ತೆರಿಗೆ ಪಾವತಿಸದ ಕುರಿತು ದೃಢೀಕರಣ ಪತ್ರ ತರಲು ಕೇಳಿದ್ದೆವು. 1.78 ಲಕ್ಷ ಮಂದಿ ಪೈಕಿ 6 ಸಾವಿರಕ್ಕೂ ಹೆಚ್ಚು ಮಂದಿ ದೃಢೀಕರಣ ಪತ್ರ ಸಲ್ಲಿಸಿದ್ದಾರೆ. ಇದೀಗ ಇವರನ್ನು ಯೋಜನೆಗೆ ಪರಿಗಣಿಸಲಾಗುವುದು. ದೃಢೀಕರಣ ಪತ್ರ ಸಲ್ಲಿಸಿದವರಿಗೆ 2 ಸಾವಿರ ರೂ. ನೀಡಲಾಗುವುದು ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿದರು.
2023ರ ಜುಲೈ ತಿಂಗಳಲ್ಲಿ ನೋಂದಣಿ ಆರಂಭವಾಯಿತು. ಆಗಸ್ಟ್ ತಿಂಗಳಿನಿಂದ ಖಾತೆಗೆ ಹಣ ವರ್ಗಾವಣೆ ಮಾಡಲಾಯಿತು. ಆರಂಭದಲ್ಲಿಈ ಯೋಜನೆಯಲ್ಲಿ 1.8 ಕೋಟಿ ಫಲಾನುಭವಿಗಳಿದ್ದರು. ತೆರಿಗೆ ವ್ಯಾಪ್ತಿಗೆ ಬರುವ ಲಕ್ಷಾಂತರ ಮಂದಿಯೂ ಈ ಯೋಜನೆಯ ಲಾಭ ಪಡೆದಿದ್ದರು.
ಇದೀಗ ಈ ಪೈಕಿ 1.78 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಇವರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ ಜಿಎಸ್ಟಿ, ತೆರಿಗೆ ವ್ಯಾಪ್ತಿಗೆ ಬರುವ ಅರ್ಜಿದಾರರನ್ನು ಪರಿಶೀಲಿಸಿದ ನಂತರ ಇದೀಗ ರಾಜ್ಯದಲ್ಲಿ 1.23 ಕೋಟಿ ಫಲಾನುಭವಿಗಳಿದ್ದಾರೆ. ಶೀಘ್ರದಲ್ಲೇ ಜೂನ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಹಣ ಬರಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳುಯೋಜನೆಯ ಆರಂಭದಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಅಂದರೆ ಆಯಾ ಜಿಲ್ಲೆಗಳ ಸಿಇಒಗಳ ನೇತೃತ್ವದಲ್ಲಿ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುತ್ತಿತ್ತು. ಇದೀಗ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ 31 ಜಿಲ್ಲೆಗಳ ಫಲಾನುಭವಿಗಳಿಗೆ ಕೇಂದ್ರ ಕಚೇರಿ ಮೂಲಕವೇ ನೇರವಾಗಿ ಫಲಾನುಭವಿಗಳಿಗೆ 2 ಸಾವಿರ ರೂ. ವರ್ಗಾವಣೆ ಮಾಡಲಾಗುವುದು. ಗೃಹಲಕ್ಷ್ಮಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಚುಣಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜೂನ್ ತಿಂಗಳ ಹಣ ಬಿಡುಗಡೆ ಸ್ವಲ್ಪ ತಡವಾಗಿದೆ. ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು, ರಾಜ್ಯ