ಮನೆಯಲ್ಲಿ ಸಾಕು ಪ್ರಾಣಿಗಳು ಮಾಡುವ ಚೇಷ್ಟೆ ಒಂದೆರಡಲ್ಲ, ಅದು ನಮಗೆ ಒಂದು ಬಾರಿ ನಗು ತರಿಸುತ್ತದೆ. ಮಕ್ಕಳಂತೆ ಅವುಗಳು ಮುಗ್ದ ಜೀವಿಗಳು. ಮನೆಯಲ್ಲಿ ಮಕ್ಕಳಿಗೂ ಅವುಗಳ ಈ ಆಟವೇ ಇಷ್ಟ. ಇದೆ ರೀತಿಯ ವೀಡಿಯೊವೊಂದು ವೈರಲ್ ಆಗಿದೆ. ಬೆಕ್ಕೊಂದು ಗೊಂದಲಕ್ಕೆ ಒಳಗಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಕ್ಕು ಬಬಲ್ ಒಡೆದು ಮಾಯವಾಗುತ್ತಿದಂತೆ ಬೆಕ್ಕಿಗೆ ಗೊಂದಲ ಶುರುವಾಗಿದೆ. ಈ ವೀಡಿಯೊ ಅನೇಕರಿಗೆ ಮನರಂಜನೆಯನ್ನು ನೀಡಿದೆ. ತೇಲುವ ಗುಳ್ಳೆಗಳು ಸಿಡಿಯುತ್ತಲೇ ಇರುವಾಗ ಬೆಕ್ಕು ಒಂದು ಬಾರಿ ಬಬಲ್ ಎಲ್ಲಿಗೆ ಹೋಯಿತು ಎಂದು ಹುಡುಕಾಡಿದೆ. ಈ ವೈರಲ್ ವೀಡಿಯೊ ಅನೇಕರನ್ನು ನಗೆಯಲ್ಲಿ ತೇಲಿಸಿದ, ಅನೇಕರು ಈ ವೀಡಿಯೊವನ್ನು ನೋಡಿ ಖುಷಿಪಟ್ಟಿದ್ದಾರೆ. ಆ ವೀಡಿಯೊ ಇಲ್ಲಿದೆ ನೋಡಿ.
ಈ ವಿಡಿಯೊದಲ್ಲಿ ಗುಳ್ಳೆಗಳ ಚಲನೆಯನ್ನು ನೋಡಿ ಬೆಕ್ಕುಗಳಿಗೆ ಗೊಂದಲ ಉಂಟಾಗಿದೆ. ಈ ವೀಡಿಯೊದ ಜೊತೆಗೆ ಒಂದು ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಎರಡು ಬೆಕ್ಕುಗಳು ಗುಳ್ಳೆಯನ್ನು ನೋಡುತ್ತಿರುವುದನ್ನು ತೋರಿಸಲಾಗಿದೆ. ಈ ಎರಡು ಬೆಕ್ಕುಗಳಲ್ಲಿ ಒಂದು ಬೆಕ್ಕು ಈ ಗುಳ್ಳೆಯನ್ನು ಗಮನಿಸುವುದಿಲ್ಲ. ಆದರೆ ಇನ್ನೊಂದು ಬೆಕ್ಕು ವಸ್ತುವಿನಂತೆ ತೇಲುವ ಹೊಳೆಯುವ ಗುಳ್ಳೆಯನ್ನು ನೋಡುತ್ತದೆ. ಗುಳ್ಳೆ ಹರುವುದನ್ನು ಕಂಡು ತಕ್ಷಣವೇ ಕುತೂಹಲದಿಂದ ಅದರ ಜತೆಗೆ ಆಟವಾಡಲು ಮುಂದಾಗುತ್ತದೆ. ಗುಳ್ಳೆ ನೆಲಕ್ಕೆ ಬಿದ್ದ ತಕ್ಷಣ ಸಿಡಿಯುತ್ತಿದ್ದಂತೆ, ಬೆಕ್ಕು ಮುಖದಲ್ಲಿ ಗೊಂದಲದ ನೋಟ ಮೂಡುತ್ತದೆ ಮತ್ತು ಬೆಕ್ಕು ಅದನ್ನು ಹುಡುಕುತ್ತಲೇ ಇರುತ್ತದೆ. ಗುಳ್ಳೆಯು ತನ್ನ ದಾರಿಯಲ್ಲಿ ಬಂದಾಗಲೆಲ್ಲಾ ಅದು ಸಿಡಿಯುತ್ತದೆ.
