ದಿಸ್ಪುರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋದ ಕಡೆಗಳಲ್ಲಿ ಕಾಂಗ್ರೆಸ್ ಸೋತಿದೆ. ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರಲ್ಲಿ ನಾಯಕತ್ವದ ಗುಣಗಳಿಲ್ಲ.
ಎಲ್ಲೆಲ್ಲಿ ರಾಹುಲ್ ಗಾಂಧಿ ಹೋಗಿದ್ದಾರೋ, ಅಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ರಾಹುಲ್ ಗಾಂಧಿಯಿಂದ ಯಾರೂ ಪ್ರೇರಣೆ ಪಡೆಯುತ್ತಿಲ್ಲ. ರಾಹುಲ್ ಗಾಂಧಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಐ.ಎನ್.ಡಿ.ಐ.ಎ ಮೈತ್ರಿ ಒಕ್ಕೂಟ ರಚನೆಯಾದಾಗಲೇ ಇದು ಹೆಚ್ಚಿನ ದಿನ ಇರುವುದಿಲ್ಲ ಎಂದು ನಾನು ಹೇಳಿದ್ದೆ.
ಕಾರಣ ಸೈದ್ಧಾಂತಿಕ ಭಿನ್ನಭಿಪ್ರಾಯ ಇದ್ದರೂ ಸರಿಹೋಗಬಹುದು. ಆದರೆ ಬಹುತೇಕ ಪಾರ್ಟಿಗಳಲ್ಲಿ ಅಜೆಂಡಾ, ಸೈದ್ಧಾಂತಿಕ ವಿಚಾರಧಾರೆಯೇ ಇಲ್ಲ. ಅಧಿಕಾರಕ್ಕಷ್ಟೇ ಮೈತ್ರಿ, ಎಲ್ಲರಿಗೂ ಪ್ರಧಾನಿ ಮೋದಿಯವರನ್ನು ಸೋಲಿಸಬೇಕು ಎಂಬ ಗುರಿ ಇದೆ. ಬಿಜೆಪಿ ಆಡಳಿತದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದರೆ ಅವರ ಬಳಿ ಉತ್ತರ ಇಲ್ಲ ಎಂದಿದ್ದಾರೆ.