ಮುಂಬಯಿ: ಎನ್ಸಿಪಿ ಸಂಸದರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನದ ಆಫರ್ ಯಾರು ನೀಡಿಲ್ಲ. ಒಂದು ವೇಳೆ ನೀಡಿದರೂ ಸ್ವೀಕರಿಸುವುದಿಲ್ಲ ಎಂದು ಎನ್ಸಿಪಿ ಸಂಸ್ಥಾಪಕ ಅಧ್ಯಕ್ಷ ಶರದ್ ಪವಾರ್ ತಿಳಿಸಿದ್ದಾರೆ. ಪುಣೆಯ ಉದ್ಯಮಿಯೊಬ್ಬರ ಮನೆಯಲ್ಲಿ ಅಜಿತ್ ಪವಾರ್ ಜತೆ ಸಭೆ ನಡೆದಿತ್ತು. ಇದರ ಬಳಿಕ ಶರದ್ ಪವಾರ್ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಆಫರ್ ನೀಡಲಾಗಿದೆ. ಐಎನ್ಡಿಐಎ ಮೈತ್ರಿಯಿಂದ ದೂರಾಗಲಿದ್ದಾರೆ ಎಂಬ ವರದಿಗಳು ಹರಡಿದ್ದವು. ಈ ಬಗ್ಗೆ ಪವಾರ್ ಕಿಡಿಕಾರಿದ್ದಾರೆ.
ಪವಾರ್ ಕುಟುಂಬಕ್ಕೆ ಕೇಂದ್ರದ ಸಚಿವ ಸ್ಥಾನದ ಆಫರ್ ನೀಡಲಾಗಿದೆ ಎಂಬ ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶರದ್ ಪವಾರ್, ”ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವ ಬಗ್ಗೆ ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಮಂತ್ರಿಗಿರಿ ಆಫರ್ ನೀಡಲಾಗಿದೆ ಎಂಬುದು ಕೇವಲ ವದಂತಿ. ಕಪೋಲ ಕಲ್ಪಿತ ಸುಳ್ಳು ಸುದ್ದಿ,” ಎಂದು ಸ್ಪಷ್ಟಪಡಿಸಿದರು.
ಬಾತ್ ರೂಮ್ ನಲ್ಲಿ ಪೈಲಟ್ ಸಾವು: 271 ಪ್ರಯಾಣಿಕರು ಬದುಕಿದ್ದೇ ರೋಚಕ..!