ಬಿಗ್ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಸದ್ಯ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ದಿವ್ಯಾ ಇನ್ಸ್ಟಾಗ್ರಾಂನಲ್ಲಿ ಹುಡುಗನ ಜೊತೆಗಿರುವ ಫೋಟೋ ಹಂಚಿಕೊಳ್ಳುವ ಮೂಲಕ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ.
ದಿವ್ಯಾ ಸುರೇಶ್ ಜೊತೆ ಕಾಣಿಸಿಕೊಂಡಿರುವ ಹುಡುಗ ಯಾರು ಎಂಬ ಕುತೂಹಲ ಶುರುವಾಗಿದೆ. ಆತ ಆಕೆಯ ಸ್ನೇಹಿತನಾ, ಬಾಯ್ ಫ್ರೆಂಡಾ ಅಥವಾ ಮದುವೆಯಾಗುವ ಹುಡುಗಾನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ದಿವ್ಯಾ ಸುರೇಶ್ ಆಗಾಗ ತಮ್ಮ ಫೊಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಈಗ ನಟಿ ಯುವಕನೊಬ್ಬನ ಜೊತೆ ಫೋಟೋ ಹಾಕಿದ್ದು ಪಕ್ಕಾ ಇದು ನಟಿಯ ಬಾಯ್ಫ್ರೆಂಡ್ ಇರಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ದಿವ್ಯಾ ಶೇರ್ ಮಾಡಿರುವ ಫೋಟೋದಲ್ಲಿ ಯುವಕನನ್ನು ತಬ್ಬಿಕೊಂಡು ಕೊರಳಿಗೆ ಮುತ್ತು ನೀಡುತ್ತಿರುವುದನ್ನು ಕಾಣಬಹುದು. ನಟಿ ಈ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದು ಈ ಫೋಟೋ ನೋಡಿದರೆ ನಿಮ್ಮನ್ನು ಫ್ರೆಂಡ್ಸ್ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
ಈ ಫೋಟೋ ಕೆಟ್ಟ ದೃಷ್ಟಿಯ ಜನರಿಗೆ. ನಿಮ್ಮ ಕೆಟ್ಟ ದೃಷ್ಟಿ ನಿಮ್ಮಲ್ಲೇ ಇಟ್ಟುಕೊಳ್ಳಿ. ಮೂರ್ಖರು. ಯಾರೂ ಭಯ ಪಡೋದಿಲ್ಲ ಎಂದು ನಟಿ ಫೋಟೋ ಜೊತೆ ಕ್ಯಾಪ್ಶನ್ ಬರೆದಿದ್ದಾರೆ. ಇದನ್ನು ನಟಿ ಯಾರಿಗಾಗಿ ಹಾಕಿದ್ದಾರೋ ನಟಿಯನ್ನು ಯಾರಾದರೂ ಟೀಕಿಸಿದರೋ ಎನ್ನುವುದು ರಿವಿಲ್ ಆಗಿಲ್ಲ.
ಇನ್ನೊಂದು ಫೋಟೋ ಶೇರ್ ಮಾಡಿರುವ ದಿವ್ಯಾ ಸುರೇಶ್ ಅವರು ಕಾರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಯುವಕನ ಮುಖ ಹಿಡಿದು ದಿವ್ಯಾ ಸುರೇಶ್ ಪೌಟ್ ಮಾಡಿದ್ದಾರೆ. ನನಗೆ ಸಂಭವಿಸಿದ ಸುಂದರವಾದ ವಿಷಯ ನೀನು ಎಂದು ದಿವ್ಯಾ ಸುರೇಶ್ ಅವರು ಪೋಸ್ಟ್ಗೆ ಕ್ಯಾಪ್ಶನ್ ಬರೆದಿದ್ದಾರೆ. ದಿರೊಂದಿಗೆ ನಟಿ ಬ್ಲ್ಯಾಕ್ ಗಾಗಲ್ಸ್ ಕೂಡಾ ಧರಿಸಿದ್ದರು. ಇಷ್ಟೇ ಅಲ್ಲದೆ ಫೋಟೋ ಜೊತೆ ಫ್ರೆಂಡುಲವ್ ಎಂದು ಹ್ಯಾಶ್ಟ್ಯಾಗ್ ಕೂಡಾ ಹಾಕಿದ್ದಾರೆ.
ಬಿಗ್ ಬಾಸ್ 8ರಿಂದ ಹೊರ ಬಂದ ಬಳಿಕ ತ್ರಿಪುರ ಸುಂದರಿ ಸೀರಿಯಲ್ನಲ್ಲಿ ದಿವ್ಯಾಗೆ ಅವಕಾಶ ಸಿಕ್ಕಿತ್ತು. ಗಂಧರ್ವ ಕನ್ಯೆ ಆಮ್ರಪಾಲಿಯಾಗಿ ದಿವ್ಯಾ ಸುರೇಶ್ ನಟಿಸಿದ್ದರು. ಈ ಹಿಂದೆ ದಿವ್ಯಾ ಸುರೇಶ್ ಅವರ ಫ್ಯಾನ್ ಪೇಜ್ಗಳಲ್ಲಿ ದಿವ್ಯಾ ಸುರೇಶ್ಗೆ ಯುವಕನೊಬ್ಬ ಕಿಸ್ ಕೊಟ್ಟ ಫೋಟೋಗಳು ವೈರಲ್ ಆಗಿದ್ದವು.
ಕ್ಯಾಪ್ಶನ್ನಲ್ಲಿ ನನಗೆ ಸಂಭವಿಸಿದ ಸುಂದರವಾದ ವಿಷಯ ನೀನು ಎಂದು ಬರೆದು ಹ್ಯಾಶ್ಟ್ಯಾಗ್ನಲ್ಲಿ ಫ್ರೆಂಡ್ ಎಂದು ಬರೆದು ಎಲ್ಲರನ್ನೂ ಕನ್ ಫ್ಯೂಸ್ ಮಾಡಿದ್ದಾರೆ. ಆದರೆ ದಿವ್ಯಾ ಶೇರ್ ಮಾಡಿರುವ ಫೋಟೋದಲ್ಲಿ ಲವರ್ ಎಂದು ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲ.