ಅಜಾತಶತ್ರು, ಕೈಗೋರಿಕೋದ್ಯಮಿ, ವಾಣಿಜ್ಯ ಸಾಮ್ರಾಜ್ಯವನ್ನು ಆಳಿದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ರತನ್ ಟಾಟಾ ಮದುವೆಯಾಗದೆ ಹಾಗೆಯೇ ಉಳಿದಿದ್ದರು. ರತನ್ ಜೀವನದಲ್ಲಿ ನಾಲ್ವರೊಂದಿಗೆ ಪ್ರೀತಿಯಲ್ಲಿದ್ದರು ಅದ್ಯಾವುದು ಮದುವೆ ವರೆಗೂ ಬಂದಿರಲಿಲ್ಲ. ಹೀಗಾಗಿ ರತನ್ ನಿಧನದ ಬಳಿಕ ಅವರು ಸಂಗ್ರಹಿಸಿದ 3800 ಕೋಟಿ ರೂ. ಸ್ವತ್ತನ್ನು ಯಾರು ಆಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
ರತನ್ ಟಾಟಾ ಅವರ 3800 ಕೋಟಿ ರೂ. ಸ್ವತ್ತಿನ ಉತ್ತರಾಧಿಕಾರಿಯಾಗಲು ನೋಯಲ್ ಟಾಟಾ, ನೆವಿಲ್ ಟಾಟಾ, ಲಿಯಾ ಟಾಟಾ ಮತ್ತು ಮಾಯಾ ಟಾಟಾ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದ್ರೆ ಇವರಲ್ಲಿ ರತನ್ ಆಸ್ತಿ ಯಾರಾ ಪಾಲಾಗಲಿದೆ ಎಂಬ ಕುತೂಹಲ ಇದೆ.
1937 ರಲ್ಲಿ ಮುಂಬೈನಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಅವರು ತಮ್ಮ 10 ನೇ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡರು. ಬಳಿಕ ಅವರನ್ನು ಅಜ್ಜಿ ಬೆಳೆಸಿದರು. ಈ ಒಂಟಿತನವು ಅವರಿಗೆ ಜೀವನದ ಅರ್ಥವನ್ನು ಕಲಿಸಿತು ಮತ್ತು 3800 ಕೋಟಿ ರೂ. ಸಾಮ್ರಾಜ್ಯವನ್ನು ಆಳಲು ಕಾರಣವಾಯಿತು.
ನೋಯಲ್ ಟಾಟಾ, ಟಾಟಾ ಸಮೂಹದ ಭಾಗವಾಗಿದ್ದಾರೆ. ನವಲ್ ಟಾಟಾ ಮತ್ತು ಸೈಮನ್ ಟಾಟಾ ದಂಪತಿಯ ಪುತ್ರ. ಟಾಟಾ ಸಮೂಹದ ಮಾಜಿ ಮುಖ್ಯಸ್ಥ ದಿವಂಗತ ರತನ್ ಟಾಟಾ ಮತ್ತು ಜಿಮ್ಮಿ ಟಾಟಾ ಅವರ ಸೋದರ ಸಂಬಂಧಿ. ರತನ್ ಟಾಟಾ ಅವರ ಕುಟುಂಬ ಸಂಬಂಧಗಳಿಂದಾಗಿ, ಅವರು ಟಾಟಾ ಪರಂಪರೆಯನ್ನು ಮುಂದುವರಿಸುವ ಸಾಧ್ಯತೆಯಿರುವ ವಾರಸುದಾರರಲ್ಲಿ ಒಬ್ಬರು. ಅವರ ಹೆಣ್ಣುಮಕ್ಕಳಾದ ಮಾಯಾ, ಲಿಯಾ ಮತ್ತು ಮಗ ನೆವಿಲ್ ಅವರನ್ನೂ ಸಹ ಟಾಟಾ ಪರಂಪರೆಯನ್ನು ಮುಂದುವರಿಸುವ ಸಂಭಾವ್ಯ ಅಭ್ಯರ್ಥಿಗಳಾಗಿ ಪರಿಗಣಿಸಲಾಗುತ್ತದೆ.
ಟ್ರೆಂಡ್ ಲಿಮಿಟೆಡ್ ಅಡಿಯಲ್ಲಿ ಸ್ಟಾರ್ ಬಜಾರ್ ನೇತೃತ್ವವನ್ನು ನೆವಿಲ್ ಟಾಟಾ ವಹಿಸುತ್ತಿದ್ದಾರೆ. ಇದು ಅವರ ಬುದ್ಧಿವಂತಿಕೆಗೆ ಸಾಕ್ಷಿ. ಮಾನಸಿ ಕಿರ್ಲೋಸ್ಕರ್ ಅವರನ್ನು ವಿವಾಹವಾದ ಅವರು, ಟಾಟಾ ಸಮೂಹದ ಭವಿಷ್ಯದ ನಾಯಕರಾಗುವ ಸಾಧ್ಯತೆ ದಟ್ಟವಾಗಿದೆ.
ಆತಿಥ್ಯ ಕ್ಷೇತ್ರದಲ್ಲಿ ಲಿಯಾ ಟಾಟಾ ಗಮನಹರಿಸುತ್ತಿದ್ದಾರೆ. ಸ್ಪೇನ್ನ IE ಬ್ಯುಸಿನೆಸ್ ಸ್ಕೂಲ್ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇಂಡಿಯನ್ ಹೋಟೆಲ್ ಕಂಪನಿ ಮತ್ತು ತಾಜ್ ಹೋಟೆಲ್ಗಳಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಟಾಟಾ ಸಮೂಹವನ್ನು ಮತ್ತಷ್ಟು ವಿಸ್ತರಿಸಲು ಸಹಾಯ ಮಾಡಿದ್ದಾರೆ.
ನೋಯಲ್ ಟಾಟಾ ಮತ್ತು ಆಲು ಮಿಸ್ತ್ರಿ ದಂಪತಿಯ ಪುತ್ರಿ ಮಾಯಾ ಟಾಟಾ. ಮಾಯಾ ಟಾಟಾ ಅವರ ತಂದೆ ರತನ್ ಟಾಟಾ ಅವರ ಸೋದರ ಸಂಬಂಧಿ. ಅದೇ ರೀತಿ, ಅವರ ತಾಯಿ ದಿವಂಗತ ಸೈರಸ್ ಮಿಸ್ತ್ರಿ ಅವರ ಸಹೋದರಿ. ಹೀಗಾಗಿ, ಅವರು ಟಾಟಾ ಸಮೂಹದೊಂದಿಗೆ ಸಂಬಂಧ ಹೊಂದಿದ್ದಾರೆ. ಟಾಟಾ ಸಮೂಹದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬೇಸ್ ಬ್ಯುಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಟಾಟಾ ಅಪಾರ್ಚುನಿಟೀಸ್ ಫಂಡ್ ಮತ್ತು ಟಾಟಾ ಡಿಜಿಟಲ್ಗೆ ಮಾಯಾ ಟಾಟಾ ಕೊಡುಗೆ ನೀಡಿದ್ದಾರೆ.