ಮಕರ ಸಂಕ್ರಾಂತಿಯು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇದಕ್ಕೆ ವಿಶೇಷವಾದ ಮಹತ್ವವಿದೆ ಹಾಗೂ ಈ ಹಬ್ಬವನ್ನು ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನರು ಹೊಸ ಬೆಳೆಗಳನ್ನು ಪೂಜಿಸುವ ಮತ್ತು ಸಂತೋಷದಿಂದ ಹಂಚಿಕೊಳ್ಳುವುದರೊಂದಿಗೆ ಈ ಹಬ್ಬ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಲೋಹ್ರಿಯ ನಂತರ ಒಂದು ದಿನ ಮಕರ ಸಂಕ್ರಾಂತಿಯನ್ನು ಗುರುತಿಸಲಾಗುತ್ತದೆ.
ಈ ವರ್ಷ ಈ ಹಬ್ಬವು ಭಾನುವಾರ, 15 ರಂದು ಬರುತ್ತದೆ. ದೃಕ್ ಪಂಚಾಂಗದ ಪ್ರಕಾರ ಸಂಕ್ರಾಂತಿ ತಿಥಿಯು 8:57, ಜನವರಿ 14 ಕ್ಕೆ ಇರುತ್ತದೆ. ಹಾಗೇ ಮಕರ ಸಂಕ್ರಾಂತಿಯ ಪುಣ್ಯ ಕಾಲವು ಬೆಳಗ್ಗೆ 7:15 ರಿಂದ ಸಂಜೆ 5:46 ರವರೆಗೆ ಇರುತ್ತದೆ. ಹಾಗೂ ಮಕರ ಸಂಕ್ರಾಂತಿಯ ಮಹಾ ಪುಣ್ಯ ಕಾಲ ಬೆಳಗ್ಗೆ 7:15 ಕ್ಕೆ ಪ್ರಾರಂಭವಾಗಿ ರಾತ್ರಿ 9:00 ಕ್ಕೆ ಕೊನೆಗೊಳ್ಳುತ್ತದೆ.
ಮಕರ ಸಂಕ್ರಾಂತಿಯನ್ನು ಹೇಗೆ ಆಚರಿಸಲಾಗುತ್ತದೆ?
ಹಿಂದೂಗಳು ಈ ಅವಧಿಯನ್ನು ಮಂಗಳಕರವೆಂದು ಪರಿಗಣಿಸಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಹೆಚ್ಚಿನ ಪ್ರದೇಶಗಳಲ್ಲಿ ಸಂಕ್ರಾಂತಿಯ ಹಬ್ಬಗಳು ಎರಡರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಹಬ್ಬದ ಸಮಯದಲ್ಲಿ ಜನರು ಸೂರ್ಯ ದೇವರನ್ನು ಪೂಜಿಸುತ್ತಾರೆ. ಹಾಗೂ ಪವಿತ್ರ ತೀರ್ಥ ಸ್ನಾನ ಮಾಡುತ್ತಾರೆ ಹಾಗೂ ನಿರ್ಗತಿಗರಿಗೆ ದಾನವನ್ನು ಮಾಡುತ್ತಾರೆ. ಗಾಳಿಪಟಗಳನ್ನು ಹಾರಿಸುತ್ತಾರೆ, ಎಳ್ಳು ಬೆಲ್ಲದ ಸಿಹಿ ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ ಹಾಗೂ ಜಾನುವಾರು ಹಾಗೂ ಬೆಲೆಗಳಿಗೆ ಪೂಜೆ ಮಾಡುತ್ತಾರೆ. ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ರೂಢಿಯಲ್ಲಿದೆ.
ಮಕರ ಸಂಕ್ರಾಂತಿಯಂದು ದಾನದ ಮಹತ್ವ:
ಮಕರ ಸಂಕ್ರಾಂತಿಯಂದು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ಹಬ್ಬವನ್ನು ಉತ್ತರಾಯಣ ಎಂದೂ ಕರೆಯುತ್ತಾರೆ. ಗಂಗೆಯಲ್ಲಿ ಸ್ನಾನ ಮಾಡುವುದು, ಉಪವಾಸ ಮಾಡುವುದು ಮತ್ತು ಕಥೆ ಕೇಳುವುದು ಈ ದಿನದಂದು ವಿಶೇಷ ಫಲವನ್ನು ನೀಡುತ್ತದೆ. ಈ ದಿನ ಮಾಡಿದ ದಾನವು ನಿಮಗೆ ಅಕ್ಷಯ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಪಂಜಾಬ್, ಉತ್ತರ ಪ್ರದೇಶ,
ಬಿಹಾರ ಮತ್ತು ತಮಿಳುನಾಡು ಮುಂತಾದ ದೇಶದ ಹಲವು ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯನ್ನು ಹೊಸ ಬೆಳೆಗೆ ಸ್ವಾಗತಿಸುವ ಹಬ್ಬ ಎಂದು ಆಚರಿಸಲಾಗುತ್ತದೆ. ಈ ದಿನ ಎಳ್ಳು ಮತ್ತು ಅದರಿಂದ ಮಾಡಿದ ಆಹಾರ ಪದಾರ್ಥಗಳನ್ನು ದಾನ ಮಾಡಲಾಗುತ್ತದೆ. ಇದಲ್ಲದೇ ಮಕರ ಸಂಕ್ರಾಂತಿಯಂದು ದೇಶದ ಹಲವು ರಾಜ್ಯಗಳಲ್ಲಿ ಗಾಳಿಪಟಗಳನ್ನು ಕೂಡ ಹಾರಿಸಲಾಗುತ್ತದೆ.
ಮಕರ ಸಂಕ್ರಾಂತಿಯ ಪರಿಣಾಮ
ಸಂತರು ಮತ್ತು ಋಷಿಗಳ ಪ್ರಕಾರ, ಜೀವಿಗಳ ಆತ್ಮವು ಮಕರ ಸಂಕ್ರಾಂತಿಯ ಪರಿಣಾಮದಿಂದ ಶುದ್ಧವಾಗುತ್ತದೆ. ಪರಿಹರಿಸುವ ಶಕ್ತಿ ಹೆಚ್ಚಾಗುತ್ತದೆ. ಜ್ಞಾನದ ನಾರುಗಳು ಅಭಿವೃದ್ಧಿಗೊಳ್ಳುತ್ತವೆ. ಜೀವಿಗಳಲ್ಲಿ ಪ್ರಜ್ಞೆಯನ್ನು ಬೆಳೆಸುವ ಹಬ್ಬವೇ ಮಕರ ಸಂಕ್ರಾಂತಿ. ಇದನ್ನು ಭಾರತದಾದ್ಯಂತ ಯಾವುದೋ ಒಂದು ರೂಪದಲ್ಲಿ ಆಯೋಜಿಸಲಾಗುವುದು.
ಮಕರ ಸಂಕ್ರಾಂತಿಯಂದು ಎಳ್ಳಿನ ಉಪಯೋಗ
ಪೂರ್ವಜರ ಆತ್ಮಶಾಂತಿಗಾಗಿ, ಆತ್ಮೋನ್ನತಿ ಮತ್ತು ಕಲ್ಯಾಣಕ್ಕಾಗಿ ಮಕರ ಸಂಕ್ರಾಂತಿಯಲ್ಲಿ ಎಳ್ಳಿನ ಆರು ಉಪಯೋಗಗಳು ಪುಣ್ಯ ಮತ್ತು ಫಲಪ್ರದವೆಂದು ವಿಷ್ಣು ಧರ್ಮಸೂತ್ರದಲ್ಲಿ ಹೇಳಲಾಗಿದೆ. ಎಳ್ಳಿನ ನೀರಿನಿಂದ ಸ್ನಾನ, ಎಳ್ಳಿನ ದಾನ, ಎಳ್ಳಿನಿಂದ ಮಾಡಿದ ಆಹಾರ, ಎಳ್ಳು ನೈವೇದ್ಯ ಇತ್ಯಾದಿಗಳನ್ನು ಮಕರ ಸಂಕ್ರಾಂತಿಯಲ್ಲಿ ಮಾಡಲಾಗುತ್ತದೆ.
ಸಂಕ್ರಾಂತಿಯನ್ನು ದೇಶದ ಹಲವೆಡೆ ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ. ಈಶಾನ್ಯ ಬಾರತದಲ್ಲಿ ಸಂಕ್ರಾಂತಿಯನ್ನು ಮಾಘ್ ಬಿಹು ಎಂದು ಆಚರಿಸಿದರೆ, ದಕ್ಷಿಣ ಭಾರತದ ಹಲವೆಡೆ ಪೊಂಗಲ್ ಎಂದು ಕರೆಯುತ್ತಾರೆ. ಇನ್ನು ಉತ್ತರ ಭಾರತದ ಹಲವೆಡೆ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ.
ಸೂರ್ಯ ಸಂಸ್ಕೃತಿಯಲ್ಲಿ, ಮಕರ ಸಂಕ್ರಾಂತಿಯ ಹಬ್ಬವನ್ನು ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಆದಿಶಕ್ತಿ ಮತ್ತು ಸೂರ್ಯನ ಪೂಜೆ ಮತ್ತು ಆರಾಧನೆಯ ಪವಿತ್ರ ದಿನವೆಂದು ಕರೆಯುತ್ತಾರೆ. ಈ ದಿನ ಶುದ್ಧ ಮನಸ್ಸಿ ನಿಂದ ಪ್ರಾರ್ಥಿಸಿ ಪೂಜಿಸಿದರೆ ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿ ದೊರೆಯುತ್ತದೆ ಎನ್ನುವ ನಂಬಿಕೆ ಪ್ರತೀತಿಯಲ್ಲಿದೆ.