ಕಳೆದ ಎರಡು ದಿನಗಳಿಂದ ಆಸ್ಕರ್ ಪ್ರಶಸ್ತಿ ವಿಜೇತ ಹಾಗೂ ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಸಖತ್ ಸುದ್ದಿಯಲ್ಲಿದ್ದಾರೆ. 29 ವರ್ಷಗಳ ವೈವಾಹಿಕ ಜೀವಕ್ಕೆ ಗುಡ್ ಬಾಯ್ ಹೇಳಿರುವ ರೆಹಮಾನ್ ಪತ್ನಿ ಸೈರಾ ಬಾನುಗೆ ವಿಚ್ಚೇದನ ಘೋಷಿಸಿದ್ದಾರೆ.
57ನೇ ವಯಸ್ಸಿಗೆ ರೆಹಮಾನ್ ವಿಚ್ಚೇಧನ ಘೋಷಿಸಿರೋದು ಹಲವರಿಗೆ ಶಾಕ್ ಆಗಿದೆ. ಏಕಾಏಕಿ ಇಬ್ಬರು ದೂರ ದೂರವಾಗ್ತಿರೋದಕ್ಕೆ ದಂಪತಿ ಕಾರಣ ತಿಳಿಸಿಲ್ಲ. ಆದರೆ ಇದು ಹಲವರಿಗೆ ಶಾಕ್ ನೀಡಿದೆ.
ಅಂದ ಹಾಗೆ ಇಂದು ಸಂಗೀತ ಕ್ಷೇತ್ರದಲ್ಲಿ ಭಾರಿ ಡಿಮ್ಯಾಂಡ್ ಕ್ರಿಯೇಟ್ ಮಾಡಿರುವ ರೆಹಮಾನ್ ಈ ಹಿಂದೆ ಹಿಂದೂವಾಗಿದ್ದರು. ಬಳಿಕ ಮುಸ್ಲಿಂ ಆಗಿ ಬದಲಾದರು. ಇದೇ ಕಾರಣಕ್ಕೆ ರೆಹಮಾನ್ ಮುಸ್ಲಿಂ ಯುವತಿಯನ್ನೇ ಮದುವೆಯಾದರು.
ಮುಸ್ಲಿಂ ಧರ್ಮಕ್ಕೆ ಎಆರ್ ರೆಹಮಾನ್ ಮಂತಾತಗೊಂಡು ಹಲವು ವರ್ಷಗಳೇ ಕಳೆದು ಹೋಗಿದೆ.
ದಿಲೀಪ್ ಕುಮಾರ್ ಅಲಿಯಾಸ್ ರೆಹಮಾನ್ ಹಿಂದೂ ಎಆರ್ ರೆಹಮಾನ್ ಅವರ ತಂದೆ ಆರ್ ಕೆ ಶೇಖರ್ ಮಲಯಾಳಂ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ರೆಹಮಾನ್ ಬಾಲ್ಯವು ಹೋರಾಟದಿಂದ ಕೂಡಿತ್ತು.
ರೆಹಮಾನ್ ಕೇವಲ ಒಂಬತ್ತು ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ಇದಾದ ನಂತರ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಶುರುವಾದವು.ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಹಿಂದೂ ಮತ್ತು ತಾಯಿ ಮುಸ್ಲಿಂ ಆಗಿದ್ದವರು. ಆ ಸಮಯದಲ್ಲಿ ಅವರ ಇಡೀ ಕುಟುಂಬ ಹಿಂದೂ ಧರ್ಮವನ್ನು ಅನುಸರಿಸಿತು.
1984 ರಲ್ಲಿ ದಿಲೀಪ್ ಕುಮಾರ್ ತಮ್ಮ ತಾಯಿಯೊಂದಿಗೆ ಇಸ್ಲಾಂಗೆ ಮತಾಂತರಗೊಂಡರು. ದಿಲೀಪ್ ಕುಮಾರ್ ಆಗಿದ್ದವರು ಅಲ್ಲಾ ರಖಾ ರೆಹಮಾನ್ (ಎಆರ್ ರೆಹಮಾನ್) ಆಗಿ ಬದಲಾದ್ರು. ತನ್ನ ಧರ್ಮವನ್ನು ಬದಲಾಯಿಸಲು ಅದೊಂದು ಘಟನೆ ರೆಹಮಾನ್ ಗೆ ಕಾರಣವಾಗಿತ್ತು.
ಮನೆಯಲ್ಲಿದ್ದ ಸಂಗೀತ ವಾದ್ಯಗಳನ್ನು ಮಾರಬೇಕಾದ ಸ್ಥಿತಿ ಬಂದಿತ್ತು. ಬಳಿಕ ತನ್ನೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ್ರು. ಎಆರ್ ರೆಹಮಾನ್ ತನಗಾಗಿಯೇ ಬೇರೆಯದೇ ಜಾಗವನ್ನು ಸೃಷ್ಟಿಸಿಕೊಂಡರು. ಆರಂಭಿಸಿದರು. ಇದರಲ್ಲಿ ಅವರು ಸಿಂಥಸೈಜರ್ ನುಡಿಸಲು ಪ್ರಾರಂಭಿಸಿದರು. ಅದರೊಂದಿಗೆ ಅವರು ಪ್ರಸಿದ್ಧ ಚೆನ್ನೈ ಬ್ಯಾಂಡ್ ‘ನೆಮೆಸಿಸ್ ಅವೆನ್ಯೂ’ ಅನ್ನು ರಚಿಸಿದರು. ಲಂಡನ್ನ ಟ್ರಿನಿಟಿ ಕಾಲೇಜಿನಿಂದ ವಿದ್ಯಾರ್ಥಿವೇತನವನ್ನು ಪಡೆದ ನಂತರ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತವನ್ನು ಅಧ್ಯಯನ ಮಾಡಿದ್ರು.
ರೆಹಮಾನ್ 1992 ರಲ್ಲಿ ನಿರ್ದೇಶಕ ಮಣಿರತ್ನಂ ಅವರ ರೋಜಾ ಸಿನಿಮಾ ಮೂಲಕ ಮೊದಲ ಬ್ರೇಕ್ ಪಡೆದರು. ಈ ಚಿತ್ರದ ಸಂಗೀತವು ರೆಹಮಾನ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಚೊಚ್ಚಲ ಚಿತ್ರಕ್ಕಾಗಿ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ್ರು. ಬಳಿಕ ರೆಹಮಾನ್ ಮುಟ್ಟಿದ್ದೆಲ್ಲ ಚಿನ್ನವಾಗೋಕೆ ಶುರುವಾಯಿತು.
ಸೂಫಿ ಸಂತರೊಬ್ಬರ ಸೂಚನೆಯಂತೆ ಎಆರ್ ರೆಹಮಾನ್ 23ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡು ಅಲ್ಲಾ ರಹಾ ರಹಮಾನ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಕಷ್ಟಪಡುತ್ತಾ ಒಂದೊಂದೆ ಮೆಟ್ಟಿಲುಗಳನ್ನು ಏರಿ ರೆಹಮಾನ್ ಇದೀಗ ಭಾರತ ಶ್ರೀಮಂತ ಮ್ಯೂಸಿಕ್ ಡೈರೆಕ್ಟರ್ ಆಗಿ ಬೆಳೆದಿದ್ದಾರೆ.ಈ ಮಧ್ಯೆ ರೆಹಮಾನ್ ಡಿವೋರ್ಸ್ ಘೋಷಿಸಿರೋದು ಪ್ರತಿಯೊಬ್ಬರಿಗೂ ಬೇಸರ ಉಂಟು ಮಾಡಿದೆ.