ನವದೆಹಲಿ: ಸ್ವಂತದ ಮನೆ ಕಟ್ಟಿಸುವುದು ಅಥವಾ ಖರೀದಿಸುವುದಕ್ಕಿಂತಲೂ ಬಾಡಿಗೆ ಮನೆಯೇ ಆರ್ಥಿಕವಾಗಿ ಲಾಭದಾಯಕ ಎನ್ನುವ ವಾದವನ್ನು ಜೆರೋಧಾ ಸಹ- ಸಂಸ್ಥಾಪಕ ನಿಖಿಲ್ ಕಾಮತ್ ಮಂಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ- ವಿರೋಧದ ಚರ್ಚೆಗಳು ಆರಂಭಗೊಂಡಿವೆ. ರಿಯಲ್ ಎಸ್ಟೇಟ್ ಮೌಲ್ಯ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ ಎನ್ನುವ ಅಂಶವನ್ನು ‘ಹಾಸ್ಯಾಸ್ಪದ’ ಎಂದ ನಿಖಿಲ್ ಭಾವಿಸಿದ್ದಾರೆ.
”ಇಂದಿನ ಮೌಲ್ಯ ಮಾಪನದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ನನಗೆ ಇಷ್ಟವಿಲ್ಲ. ಏಕೆಂದರೆ ವೈಯಕ್ತಿಕವಾಗಿ ಹೇಳುವುದಾದರೆ ರಿಯಲ್ ಎಸ್ಟೇಟ್ನ ಇಂದಿನ ಮೌಲ್ಯವೇ ಹಾಸ್ಯಾಸ್ಪದ ಮತ್ತು ಬಡ್ಡಿದರ ಲೆಕ್ಕ ಹಾಕಿದರೆ ತೀರ ಹಿಂದುಳಿದಿದೆ ಎಂದು ನಾನು ಭಾವಿಸುತ್ತೇನೆ. ಮನೆಗಳು ಮತ್ತು ಕಚೇರಿಗಳ ಬೆಲೆಗಳು ಈಗಿನ ಬಡ್ಡಿ ದರಕ್ಕೆ ಹೋಲಿಸಿದರೆ, ತುಂಬಾ ದುಬಾರಿ,” ಎಂದು ನಿಖಿಲ್ ಕಾಮತ್ ಅವರು ಪಾಡ್ಕಾಸ್ವ್ನಲ್ಲಿ ಹೇಳಿದ್ದಾರೆ.
2021ರಲ್ಲಿ ಮಾಧುರಿ ದೀಕ್ಷಿತ್ ಮತ್ತು ಕೃತಿ ಸನೋನ್ ಸೇರಿದಂತೆ ಹಲವಾರು ಪ್ರಮುಖ ಬಾಲಿವುಡ್ ತಾರೆಯರು ತಮಗೆ ಮುಂಬಯಿನಲ್ಲಿ ಮನೆಯನ್ನು ಖರೀದಿಸುವಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದರು. ತಮ್ಮದೇ ಸ್ವಂತ ಸೂರು ಹೊಂದುವುದಕ್ಕಿಂತ ಬಾಡಿಗೆ ಮನೆಗೆ ಆದ್ಯತೆ ನೀಡಿದ್ದರು. ತಾವು ಸ್ವಂತದ ಮನೆಯಲ್ಲಿ ವಾಸಿಸುತ್ತಿಲ್ಲ ಎಂದೂ ನಿಖಿಲ್ ಬಹಿರಂಗಪಡಿಸಿದ್ದು,
”ಮುಂದಿನ ದಿನಗಳಲ್ಲೂ ಇದೇ ರೀತಿಯಲ್ಲಿ ಬದುಕಲು ಯೋಜಿಸುತ್ತೇನೆ. ನಾನು ಹೊಂದಿರುವ ಒಂದೇ ಒಂದು ಮನೆ ಎಂದರೆ, ಅದು ನನ್ನ ಹೆತ್ತವರು ವಾಸಿಸುವ ಸ್ಥಳವಾಗಿದೆ. ಅದು ಭಾವನಾತ್ಮಕ ಕಾರಣಗಳಿಗಾಗಿ ಹೆಚ್ಚು ಮಹತ್ವ ಪಡೆದಿದೆ. ಆದರೆ ನಾನು ಸ್ವಂತದ ಮನೆಯನ್ನು ಬಯಸಲಾರೆ,” ಎಂದು ನಿಖಿಲ್ ಹೇಳಿದ್ದಾರೆ.