ಹಾವು-ಮುಂಗುಸಿ ಆ ಜನ್ಮದ ಶತ್ರುಗಳೆಂದೇ ಹೆಸರುವಾಸಿಯಾಗಿವೆ. ಉಭಯ ಜೀವಿಗಳು ಯಾವುದೇ ಕ್ಷಣದಲ್ಲಿ ಎದುರು-ಬದುರಾದರೆ ಸಾಕು ಅಲ್ಲೊಂದು ಯುದ್ಧ ನಡೆದೇ ತೀರುತ್ತದೆ.
ಅಷ್ಟಕ್ಕೂ ಹಾವು-ಮುಂಗುಸಿ ನಡುವೆ ಇಷ್ಟೊಂದು ದ್ವೇಷ ಯಾಕೆ? ಇಬ್ಬರ ಮಧ್ಯೆ ಶಾಶ್ವತ ಪೈಪೋಟಿ ಏಕೆ? ಒಬ್ಬರನ್ನೊಬ್ಬರು ನೋಡಿ ಏಕೆ ಆಕ್ರಮಣ ಮಾಡುತ್ತವೆ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಅತ್ಯಂತ ಸರಳ ಉತ್ತರವೆಂದರೆ ಕೆಲವು ಅಧ್ಯಯನಗಳ ಪ್ರಕಾರ, ಹಾವುಗಳು ಮತ್ತು ಮುಂಗುಸಿಗಳು ನೈಸರ್ಗಿಕ ಶತ್ರುಗಳು ಎಂದು ಹೇಳಲಾಗಿದೆ. ಸರ್ವೈವಲ್ ಆಫ್ ಫಿಟ್ಟೆಸ್ಟ್ ಎಂಬ ಚಾರ್ಲ್ಸ್ ಡಾರ್ವಿನ್ ಸಿದ್ಧಾಂತದ ಪ್ರಕಾರ ತಮ್ಮ ಪ್ರಾಣ ಉಳಿಸಿಕೊಳ್ಳಲು ಉಭಯ ಜೀವಿಗಳು ಪರಸ್ಪರ ಆಕ್ರಮಣ ಮಾಡುತ್ತವೆ. ಹಾವು ಮುಂಗುಸಿಯನ್ನು ಕೊಂದು ಬದುಕಲು ಬಯಸುತ್ತದೆ. ಅಂತೆಯೇ, ಮುಂಗುಸಿಯು ಹಾವನ್ನು ಕೊಲ್ಲಲು ಬಯಸುತ್ತದೆ.
ಮತ್ತೊಂದು ಉತ್ತರ ಪ್ರಕಾರ ಮುಂಗುಸಿಯ ಮರಿಗಳು ಹೆಚ್ಚಾಗಿ ಹಾವಿಗೆ ಬಲಿಯಾಗುತ್ತವೆ ಎಂದು ಹೇಳಲಾಗಿದೆ. ಹಾವು ಹೆಚ್ಚಾಗಿ ಮುಂಗುಸಿಯ ಮರಿಗಳನ್ನು ತಿನ್ನುತ್ತವೆ. ಆದ್ದರಿಂದ, ಮುಂಗುಸಿಯು ತನ್ನ ಮರಿಗಳನ್ನು ರಕ್ಷಿಸಲು ಹಾವಿನ ಮೇಲೆ ದಾಳಿ ಮಾಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಮುಂಗುಸಿಯು ಹಾವಿಗಿಂತ ಚುರುಕಾಗಿರುವುದರಿಂದ, ಹೆಚ್ಚಿನ ಸಂದರ್ಭಗಳಲ್ಲಿ ಅದು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು. ಹಾವು ಮತ್ತು ಮುಂಗುಸಿಯ ನಡುವಿನ ಕಾದಾಟದಲ್ಲಿ ಮುಂಗುಸಿಯು ಶೇ. 80 ರಷ್ಟು ಸಮಯವನ್ನು ಗೆಲ್ಲುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಮುಂಗುಸಿಯು ತನ್ನ ದೇಹದಲ್ಲಿ ಅಸೆಟೈಲ್ಕೋಲಿನ್ ಎಂಬ ಅಂಶವನ್ನು ಹೊಂದಿದ್ದು, ಹಾವಿನ ವಿಷದಲ್ಲಿರುವ ನ್ಯೂರೋಟಾಕ್ಸಿನ್ನಿಂದ ರಕ್ಷಿಸಲ್ಪಡುತ್ತದೆ. ಮುಂಗುಸಿಯ ಡಿಎನ್ಎಯಲ್ಲಿರುವ ಆಲ್ಫಾ ಮತ್ತು ಬೀಟಾ ಬ್ಲಾಕರ್ಗಳು ಹಾವಿನ ವಿಷದ ಪರಿಣಾಮಗಳಿಂದ ರಕ್ಷಿಸುತ್ತವೆ.