ರಾಯಚೂರು: ಮುಡಾ ಕೇಸಲ್ಲಿ ಸಿಎಂ ಭಯಪಡುತ್ತಿದ್ದಾರೆಂಬ ಹೇಳಿಕೆ ವಿಚಾರ ಸಂಬಂಧಿಸಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ
ರಾಯಚೂರಿನಲ್ಲಿ ಮಾತನಾಡಿದ ಅವರು, ನಾನು ಏನೂ ತಪ್ಪು ಮಾಡಿಲ್ಲದಿದ್ದಾಗ ಯಾಕೆ ಭಯಪಡಬೇಕು?
ನಾನು ಯಾರಿಗೂ ಭಯಪಡುವ ವ್ಯಕ್ತಿಯೇ ಅಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಹಾಗೆ ಸುಳ್ಳು ಆರೋಪ ಮಾಡಿದಾಗ ರಾಜೀನಾಮೆ ಕೊಡಲು ಆಗುತ್ತಾ? ವಿಪಕ್ಷಗಳು ಸುಳ್ಳು ಆರೋಪ ಮಾಡಿದ್ರೆ ನಾವು ಉತ್ತರ ಕೊಡ್ತೆವೆ ನಾನು ರಾಜೀನಾಮೆ ಕೊಡೇನ ಎಂದು ಪ್ರಶ್ನೆ ಮಾಡಿದರು.
ಸಿಎಂ ರಾಜೀನಾಮೆ ಕೊಡ್ತಾರಾ ಎಂಬಕೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು R.ಅಶೋಕ್ ಮೊದಲು ರಾಜೀನಾಮೆ ಕೊಡಲಿ ಎಂದ ಸಿದ್ದರಾಮಯ್ಯ ರಾಯಚೂರಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಸಮರ ಸಾರಿದರು.