ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಪುಟ್ಟ ಮಕ್ಕಳಿಗೆ ಹಲವು ಪೌಷ್ಟಿಕ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕೊಡುವುದು ಸಾಮಾನ್ಯವಾಗಿದೆ. ಹೀಗಿರುವಾಗ ದೇಶಾದ್ಯಂತ ಕೋಟ್ಯಂತರ ಮಂದಿ ಸೇವಿಸುವ ಪೌಷ್ಟಿಕ ಹುಡಿ ಬೊರ್ನ್ವಿಟಾವು ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿದೆಯೆಂದು ಆರೋಪಗಳ ಬಗ್ಗೆ ಉತ್ತರಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ವು, ಉತ್ಪಾದಕಸಂಸ್ಥೆಯಾದ ಮೊಂಡೆಲೆಝ್ ಇಂಡಿಯಾ ಇಂಟರ್ನ್ಯಾಶನಲ್ ಗೆ ಬುಧವಾರ ಪತ್ರ ಬರೆದಿದೆ.
‘ಮಕ್ಕಳು (Children) ಕುಡಿಯುವ ಬೋರ್ನ್ವೀಟಾದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ’ ಎಂಬ ದೂರಿನ ಹಿನ್ನೆಲೆಯಲ್ಲಿ, ತನ್ನ ಎಲ್ಲ ದಾರಿ ತಪ್ಪಿಸುವ ಜಾಹೀರಾತು (Advertisement), ಪ್ಯಾಕೇಜಿಂಗ್ ಹಾಗೂ ಲೇಬಲ್ಗಳನ್ನು ಹಿಂತೆಗೆದುಕೊಳ್ಳುವಂತೆ ಮಕ್ಕಳ ಹಕ್ಕುಗಳ ಆಯೋಗ ‘ಎನ್ಸಿಪಿಸಿಆರ್’ ಬೋರ್ನ್ವೀಟಾಗೆ ಸೂಚಿಸಿದೆ. ಆಯೋಗವು ಬೌರ್ನ್ವೀಟಾಗೆ ನೀಡಿರುವ ನೊಟೀಸ್ನಲ್ಲಿ ಉತ್ಪನ್ನದ ಕುರಿತು 7 ದಿನಗಳೊಳಗಾಗಿ ವಿವರವಾದ ಮಾಹಿತಿಯನ್ನು (Information) ನೀಡುವಂತೆ ಸೂಚಿಸಿದೆ.
‘ಬೋರ್ನ್ವೀಟಾ ಕೇವಲ ಅಧಿಕ ಸಕ್ಕರೆ ಅಂಶ ಹೊಂದಿದೆ. ಇದರಿಂದ ಮಕ್ಕಳ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಹಾಗೂ ಹಾನಿಕರ’ ಎಂದು ರೇವಂತ್ ಹಿಮಂತ್ಸಿಂಗ್ಕಾ ಎಂಬುವರು ಆರೋಪಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಬೋರ್ನ್ವೀಟಾ ನೀಡಿದ ನೋಟಿಸ್ ಮೇರೆಗೆ ಹಿಮಂತ್ ತಮ್ಮ ಖಾತೆಯಿಂದ ವೀಡಿಯೋವನ್ನು ಅಳಿಸಿ ಹಾಕಿದ್ದರೂ, ಅಷ್ಟೊತ್ತಿಗಾಗಲೇ ಇದು ಸಾಕಷ್ಟುಸುದ್ದಿ ಮಾಡಿತ್ತು. ಗ್ರಾಹಕರನ್ನು ತಪ್ಪುದಾರಿಗೆಳೆಯುವ ಬೊರ್ನ್ವಿಟಾದ ಜಾಹೀರಾತುಗಳು ಹಾಗೂ ಲೇಬಲ್ ಗಳನ್ನು ಪರಿಶೀಲಿಸುವಂತೆ ಮತ್ತು ಹಿಂತೆಗೆದುಕೊಳ್ಳುವಂತೆಯೂ ಅದು ಮೊಂಡೆಲೆಝ್ ಇಂಡಿಯಾಗೆ ಸಲಹೆ ನೀಡಿದೆ