ನವದೆಹಲಿ ;– ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಯಾಕಿಲ್ಲ? ಎಂಬ ಪ್ರಶ್ನೆಗೆ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.
ಮೇ ತಿಂಗಳಿನಿಂದ ಜನಾಂಗೀಯ ಘರ್ಷಣೆಗಳು ನಡೆಯುತ್ತಿದ್ದರೂ ಮಣಿಪುರದ ರಾಜ್ಯ ಸರ್ಕಾರವನ್ನು ಏಕೆ ವಜಾಗೊಳಿಸಲಾಗಿಲ್ಲ ಎಂಬುದಕ್ಕೆ ಕಾರಣವನ್ನು ಗೃಹ ಸಚಿವ ಅಮಿತ್ ಷಾ ಇಂದು ಲೋಕಸಭೆಯಲ್ಲಿ ವಿವರಿಸಿದರು.
ಮೇ ತಿಂಗಳಿನಿಂದ ಭಯಾನಕ ಘಟನೆಗಳು ನಡೆಯುತ್ತಿದ್ದು ಇನ್ನೂ ಹಿಂಸಾಚಾಋ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಣಿಪುರದ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಅದಕ್ಕೂ ಮುಂಚೆಯೇ, ಜೂನ್ ನಲ್ಲಿ ಅಮಿತ್ ಷಾ ಜತೆಗಿನ ಸಭೆಯಲ್ಲಿ, ಪ್ರತಿಪಕ್ಷಗಳು ಎನ್ ಬೈರೆನ್ ಸಿಂಗ್ ಸರ್ಕಾರವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿತ್ತು.
ಆ ವ್ಯಕ್ತಿಯು ಉಸ್ತುವಾರಿ ವಹಿಸಿದರೆ ಶಾಂತಿ ಇರಲು ಸಾಧ್ಯವಿಲ್ಲ’ ಎಂದು ಆರ್ಜೆಡಿ ಸಂಸದ ಮನೋಜ್ ಝಾ ಸಭೆಯಲ್ಲಿ ಹೇಳಿದ್ದರು. ಈ ಮೂಲಕ ಮಣಿಪುರದಲ್ಲಿ ರಾಜ್ಯ ನಾಯಕತ್ವದ ಬಗ್ಗೆ ಪ್ರತಿಪಕ್ಷದ ನಂಬಿಕೆಯ ಕೊರತೆಯನ್ನು ಎತ್ತಿ ತೋರಿಸಿದರು.
ಕಾಂಗ್ರೆಸ್ನ ಗೌರವ್ ಗೊಗೊಯಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸುಪ್ರಿಯಾ ಸುಲೆ ಮತ್ತು ತ್ರಿಣಮೂಲ ಕಾಂಗ್ರೆಸ್ನ ಸೌಗತಾ ರಾಯ್ ಸೇರಿದಂತೆ ವಿವಿಧ ಪ್ರತಿಪಕ್ಷ ನಾಯಕರು ನಿನ್ನೆ ಸಂಸತ್ತಿನಲ್ಲಿ ಈ ಬೇಡಿಕೆಯನ್ನು ಪುನರುಚ್ಚರಿಸಿದರು.
ಅವರು ಪಶ್ಚಿಮ ಬಂಗಾಳಕ್ಕೆ ನಿಯೋಗಗಳನ್ನು ಕಳುಹಿಸುತ್ತಿದ್ದಾರೆ. ಆದರೆ ನಮ್ಮ ಸಹೋದರ ಸಹೋದರಿಯರು ಸಾಯುತ್ತಿರುವ ಮಣಿಪುರಕ್ಕೆ ಒಂದು ನಿಯೋಗವೂ ಹೋಗಿಲ್ಲ. ನಿಮಗೆ ಸಹಾನುಭೂತಿ ಇಲ್ಲ, ಅದಕ್ಕಾಗಿಯೇ ನೀವು ಮಣಿಪುರಕ್ಕೆ ಹೋಗಿಲ್ಲ. ಪ್ರಸ್ತುತ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯದಲ್ಲಿ ವಿಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ ‘ಎಂದು ಶ್ರೀ ರಾಯ್ ಹೇಳಿದರು.