PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ನಿಷೇಧಿತ ಅಂಬರ್ ಗ್ರೀಸ್ ಮಾರಾಟ: ಇಬ್ಬರು ಆರೋಪಿಗಳ ಬಂಧನ

June 1, 2023

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ : ಖತರ್ನಾಕ್ ಕಳ್ಳರಿದ್ದಾರೆ!

June 1, 2023

ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ಪತ್ರ

June 1, 2023
Facebook Twitter Instagram
Thursday, June 1
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » Ugadi 2023: ಯುಗಾದಿಯಲ್ಲಿ ಬೇವುಬೆಲ್ಲ ಯಾಕೆ ಸೇವಿಸ್ಬೇಕು? ಯುಗಾದಿಯ ಹೊಸತನದ ಪೌರಾಣಿಕ ಹಿನ್ನೆಲೆ ,ಇಲ್ಲಿದೆ ಮಾಹಿತಿ
ಲೈಫ್ ಸ್ಟೈಲ್ Prajatv KannadaBy Prajatv KannadaMarch 20, 2023

Ugadi 2023: ಯುಗಾದಿಯಲ್ಲಿ ಬೇವುಬೆಲ್ಲ ಯಾಕೆ ಸೇವಿಸ್ಬೇಕು? ಯುಗಾದಿಯ ಹೊಸತನದ ಪೌರಾಣಿಕ ಹಿನ್ನೆಲೆ ,ಇಲ್ಲಿದೆ ಮಾಹಿತಿ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹಾಗೆಯೆ ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಅರ್ಥ “ಯುಗ+ಆದಿ” – ಹೊಸ ಯುಗದ ಆರಂಭ. ಇಂದಿನ ಸಂಚಿಕೆಯಲ್ಲಿ ಯುಗಾದಿ ಹಬ್ಬದ ವಿಶೇಷ , ಯುಗಾದಿಯಲ್ಲಿ ಯಾಕೆ ಎಳ್ಳೂ-ಬೆಲ್ಲವನ್ನೆ ತಿಂತಾರೆ ,

Demo

ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ.

ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ.

ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ  ದಾಖಲಿವೆ. ಅಲ್ಲದೇ ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ವರ್ಷದ ಶುಭ ದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳುವರು. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.
ಬಿದಿಗೆ ಚಂದ್ರ ದರ್ಶನ ಅಂದು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ಅಂದರೆ ಸತ್ಕಾರ್ಯಗಳಿಗೋಸ್ಕರ ನಮ್ಮನ್ನು ತೊಡಗಿಸಿಕೊಳ್ಳುವ ದಿನ. ವರ್ಷವಿಡೀ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಕೇಳಿಕೊಳ್ಳುವ ದಿವಸ. ಈ ದಿನ ಯಾರಿಗೆ ಏನನ್ನು ಪಡೆಯುವರೋ ಅದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಅಂದು ಬಿದಿಗೆಯ ದಿನ ಚಂದ್ರದರ್ಶನ ಮಾಡುವರು. ‘ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಸೃಷ್ಟಿ ನಾಟಕದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ.

ಮನೆಯ ಪ್ರವೇಶದ್ವಾರದ ಬಳಿ ಎಲೆಗಳನ್ನು ನೇತುಹಾಕುವುದನ್ನು ತೋರಣ ಎಂದು ಕರೆಯಲಾಗುತ್ತದೆ.

ಇದು ಅತ್ಯಂತ ಶುಭವೆಂದು ಪರಿಗಣಿಸಲ್ಪಟ್ಟಿದೆ ಏಕೆಂದರೆ ಇದು ದುಷ್ಟಶಕ್ತಿಗಳನ್ನು ಮತ್ತು ನಕಾರಾತ್ಮಕ ಶಕ್ತಿಯನ್ನು ಕೊಲ್ಲುತ್ತದೆ ಎಂದು ನಂಬಲಾಗಿದೆ. ಎಲೆಗಳನ್ನು ಕಟ್ಟುವುದರಿಂದ ಮನೆ ಮಾಲೀಕರ ಆಸೆಗಳನ್ನು ನನಸಾಗಿಸಬಹುದು   ಎಂದು    ಕೂಡ ನಂಬಲಾಗಿದೆ. ಮಾವಿನ ಮರ ಮತ್ತು ಅದರ ಎಲೆಗಳು ಲಕ್ಷ್ಮಿ, ಗೋವರ್ಧನ, ಗಂಧರ್ವ ಮತ್ತು ಫಲವತ್ತತೆಯ ದೇವರಂತಹ ದೇವರುಗಳ ವಾಸಸ್ಥಾನವೆಂದು ನಂಬಲಾಗಿದೆ.

ಮನೆ, ದೇವಾಲಯಗಳು ಅಥವಾ ಆಚರಣೆಗಳನ್ನು ನಡೆಸುವ ಪ್ರದೇಶಗಳನ್ನು ಎಲೆಗಳಿಂದ ಅಲಂಕರಿಸುವುದು ಸಾಮಾನ್ಯ ಅಭ್ಯಾಸವಾಗಿದೆ .ಒಂದು ಸಂಪ್ರದಾಯದಂತೆ ವೈಜ್ಞಾನಿಕ ಬೆಂಬಲದಿಂದ  ನೋಡುವುದಾದರೆ ….. ತೋರಣವನ್ನು  ತಾಜಾ ಹಸಿರು ಮಾವಿನ ಎಲೆಗಳಿಂದ ತಯಾರಿಸಲಾಗುತ್ತದೆ ಏಕೆಂದರೆ ಅವು ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಮತ್ತು ಆಕ್ಸಿಜನ್ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ. ಇದು ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ ವಾಗಿ ಮತ್ತು ತಂಪಾಗಿಡಲು ಸಹಾಯ ಮಾಡುತ್ತದೆ.

ತಿಯೊರಿಟಿಕಲಿ , ಎಲೆಗಳನ್ನು ಫಿಲ್ಟರ್ ಮಾಡಿದಾಗ ಗಾಳಿಯನ್ನು ಶುದ್ಧೀಕರಿಸಲಾಗುತ್ತದೆ. ಹೊಸದಾಗಿ ಬಿದ್ದ ಎಲೆಗಳೊಂದಿಗೆ, ಪೋಟೊಸಿನ್ತಸಿಸ್  ಪ್ರಕ್ರಿಯೆಯು ನಡೆಯುತ್ತದೆ. ಹಸಿರು ಬಣ್ಣವು ಮನಸ್ಸಿಗೆ ಹಿತವಾದ ಮತ್ತು ಉಲ್ಲಾಸಕರವಾಗಿರುತ್ತದೆ, ಇದು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದ್ವಾರದಲ್ಲಿ ನೇತಾಡುವ ಎಲೆಗಳ ಹಾರವನ್ನು ನೀವು ಮನೆಗೆ ಬಂದ ತಕ್ಷಣ ಸ್ವಯಂಚಾಲಿತವಾಗಿ ನಿಮಗೆ ವಿಶ್ರಾಂತಿ ನೀಡುತ್ತದೆ.

ಒಣ ಮಾವಿನ ಎಲೆಗಳನ್ನು ವಿಶೇಷವಾಗಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿದಾಗ ಕಡಿತ ಮತ್ತು ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಒಣ ಮಾವಿನ ಎಲೆಗಳ ಹಾರವನ್ನು ಹೊಂದಿರುವುದು ಗಾಯಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಸೂಕ್ತವಾಗಿದೆ.

ಅಂದಿನ ವಿಶೇಷ ತಿನಿಸು

ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. *ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.

ಬೇವು-ಬೆಲ್ಲ

ಯುಗಾದಿಯ ದಿನ ಸುಖದ ಸಂಕೇತವಾದ  ಬೆಲ್ಲವನ್ನೂ  ಮತ್ತು ಕಷ್ಟದ ಸಂಕೇತವಾದ  ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:

  • ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
  • ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| – ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೇ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ. ಹೀಗೆ ಯುಗಾದಿಯು `ಭಕ್ತರಿಗಾಗಿ, ವಿಶಾಲ ಹೃದಯದ ಶಿವ ಶರಣೆಯರಿಗಾಗಿ, ಮುಕ್ತಿ ಬಯಸುವ ಆರಾಧಕರಿಗಾಗಿ, ಶಿವನು ಭಕ್ತರ ಕರೆಗೆ ಓಗೊಟ್ಟು, ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ’ ಎಂಬ ಪರಮ ಸಂದೇಶವನ್ನು ನೀಡುವ ಮಹಾನ್ ಪರ್ವವಾಗಿದೆ.

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತಿದೆ’

ಎಂದು ಹೇಳುತ್ತಾ ನಾವು ಎಲ್ಲರೂ ಯುಗಾದಿಯ ನಿಜ ಅರ್ಥ ತಿಳಿದು ಆಚರಿಸೋಣ.

ನಿಮ್ಮ ಬದುಕಿನ ಕಷ್ಟಗಳೆಲ್ಲಾ ದೂರವಾಗಲಿ. ನಿಮ್ಮ ಸಾಧನೆಯ ಪಯಣ ಹಿತಕರವಾಗಿಲಿ. ಕತ್ತಲ ನಂತರ ಬೆಳಕು ಬಂದೇ ಬರುತ್ತದೆ, ಮುಂಚಿತವಾಗಿಯೇ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

 

Share. Facebook Twitter WhatsApp Pinterest LinkedIn Tumblr Telegram Email

Related Posts

ಬೇಸಿಗೆಯಲ್ಲಿ ತಂಪಾಗಿರೋಕೆ ಇಲ್ಲಿದೆ ನೋಡಿ ರಾಗಿ ಗಂಜಿ ಮಾಡೋ ವಿಧಾನ

June 1, 2023

ಲವಂಗ ಬಳಸಿ ವಿವಿಧ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ..!

May 31, 2023

ಹದಿಹರೆಯದ ವಯಸ್ಸಿನಲ್ಲಿ ಖಿನ್ನತೆಗೆ ಒಳಗಾದ್ರೆ ಭವಿಷ್ಯದಲ್ಲಿ ಕಾಡುತ್ತೆ ಹೃದ್ರೋಗ..!

May 30, 2023

ಬೇಸಿಗೆಯಲ್ಲಿ ತಾಳೆ ಹಣ್ಣು ಸೇವಿವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

May 29, 2023

ಚಹಾದೊಂದಿಗೆ ಬಿಸ್ಕೆಟ್ ತಿನ್ನೋಂದ್ರಿಂದ ಈ ಸಮಸ್ಯೆ ಆಗೋದು ಗ್ಯಾರಂಟಿ..!

May 28, 2023

ಸಪೋಟ ಹಣ್ಣಿನಲ್ಲಿ ಸಿಗುವ ಆರೋಗ್ಯಕರ ಲಾಭಗಳು ಒಂದಾ ಎರಡಾ..?

May 27, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.