ನವದೆಹಲಿ: ಅಯೋಧ್ಯೆ (Ayodhya) ರಾಮ ಮಂದಿರದಲ್ಲಿ (Sri Ram Mandir) ಬಾಲ ರಾಮನ ʼಪ್ರಾಣ ಪ್ರತಿಷ್ಠಾʼ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮಾತ್ರ ಆಹ್ವಾನ ನೀಡಿದ್ದಕ್ಕೆ ಕಾಂಗ್ರೆಸ್ (Congress) ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ (Salman Khurshid) ಆಹ್ವಾನವು ಕೇವಲ ಒಂದು ಪಕ್ಷಕ್ಕೆ ಹೋಗುತ್ತಿದೆಯೇ? ಯಾರಿಗೆ ತಲುಪುತ್ತದೆ ಮತ್ತು ಯಾರಿಗೆ ತಲುಪುವುದಿಲ್ಲ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲಾರೆ. ಆದರೆ ದೇವರು ಈಗ ಒಂದು ಪಕ್ಷಕ್ಕೆ ಮಾತ್ರ ಸೀಮಿತವೇ?. ಈ ಕಾರ್ಯಕ್ರಮವನ್ನು ಕೇವಲ ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲಾಗುತ್ತಿದೆ. ಇದು ಪಕ್ಷದ ಕಾರ್ಯಕ್ರಮವೋ ಅಥವಾ ಒಬ್ಬರಿಗೆ ಮಾತ್ರ ಸಂಬಂಧಿಸಿದ್ದೋ? ಎಲ್ಲರಿಗೂ ಕಾರ್ಯಕ್ರಮದ ಆಹ್ವಾನ ಕಳುಹಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಘೋಷಣೆ, ಪ್ರಕಟಣೆ ಬಂದಿಲ್ಲ ಎಂದು ತಿಳಿಸಿದ್ದಾರೆ
ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಆರ್ಎಸ್ಎಸ್ (RSS) ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ಅಯೋಧ್ಯೆಯಲ್ಲಿರುವ ರಾಮಮಂದಿರ ಲೋಕಾರ್ಪಣೆಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಅಧಿಕೃತ ಆಹ್ವಾನ ನೀಡಿತ್ತು.