ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಸ್ಟಾರ್ ನಟ ದರ್ಶನ್, ಸ್ಟೂನಿ ಬ್ರೂಕ್ ಮಾಲೀಕ ಪ್ರದೋಶ್ ಸೇರಿದಂತೆ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣವನ್ನು ಪೊಲೀಸರು ಈ ವರೆಗೆ ನಿಭಾಯಿಸಿರುವ ರೀತಿಗೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
ನಟ ದರ್ಶನ್ ಬಂಧನ ಮಾಡಿದ ಬೆಂಗಳೂರು ಪೊಲೀಸರಿಗೆ ಜನರು ಶಭಾಷ್ ಎಂದಿದ್ದಾರೆ.
ಕಸ್ತೂರಿ ನಗರದಲ್ಲಿ ಆಯೋಜಿಸಿದ್ದ ಪೂರ್ವ ವಿಭಾಗದ ಮಾಸಿಕ ಜನಸಂಪರ್ಕ ಸಭೆಯಲ್ಲಿ ನಾಗರೀಕರೊಬ್ಬರು ನಗರ ಪೊಲೀಸ್ ಆಯುಕ್ತರಿಗೆ ಅಭಿನಂದನೆ ತಿಳಿಸಿದ್ದಾರೆ. ಮುರುಳಿ ಎಂಬ ವ್ಯಕ್ತಿ ವೇಳೆ ದರ್ಶನ್ ಬಂಧಿಸಿದಕ್ಕೆ ‘ಕಮಿಷನರ್ ಸಾಹೆಬ್ರೆ ನಿಮಗೆ ಅಭಿನಂದನೆ’ ಎಂದು ಹೇಳಿದ್ದಾರೆ. ದೇಶದಲ್ಲಿ ಯಾವುದೇ ವ್ಯಕ್ತಿ ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತೆ ಅಂತ ತೊರಿಸಿಕೊಟ್ಟಿದ್ದು ನಮ್ಮ ಪೊಲೀಸರು ಎಂದಿದ್ದಾರೆ. ಹೀಗೆ ಹೇಳ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಜನ ಚಪ್ಪಾಳೆ ತಟ್ಟಿದ್ದಾರೆ.
ಆರೋಪಿಗಳ ಪರವಾಗಿ ಹಲವು ಪ್ರಭಾವಿಗಳ ಒತ್ತಡ ಬಂದಿದ್ದರೂ ಸಹ ಯಾವುದಕ್ಕೂ ಬಗ್ಗೆ ಶಿಸ್ತಿನಿಂದ ಹಾಗೂ ನಿಷ್ಠೂರತೆಯಿಂದ ಕೆಲಸ ಮಾಡಿರುವ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿರುವುದಕ್ಕೆ ನೂರೈವತ್ತಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಪ್ರಕರಣದಲ್ಲಿ ಕಲೆ ಹಾಕಿದ್ದಾರೆ. ಈ ಬಗ್ಗೆ ನಾಗರೀಕರು ಭೇಷ್ ಎಂದಿದ್ದಾರೆ.
ಇನ್ನೂ ದರ್ಶನ್ ರ ನ್ಯಾಯಾಂಗ ಬಂಧನದ ಅವರು ಆ.2ರವರೆಗೆ ಮುಂದೂಡಲಾಗಿದೆ. ಈ ಮಧ್ಯೆ ದರ್ಶನ್ಗೆ ಮನೆಯೂಟಕ್ಕೆ ವ್ಯವಸ್ಥೆ ಮಾಡುವಂತೆ ಪತ್ನಿ ವಿಜಯಲಕ್ಷ್ಮಿ ಹಾಗೂ ದಿನಕರ್ ತೂಗುದೀಪ್ ಬಳಿ ಹೇಳಿದ್ದರಂತೆ ಹೀಗಾಗಿ ಮನೆಯೂಟಕ್ಕೆ ಅನುಮತಿ ನೀಡುವಂತೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೆ ದರ್ಶನ್ ಗೆ ಮನೆಯೂಟಕ್ಕೆ ಕೋರ್ಟ್ ನಿರಾಕರಿಸಿದೆ.
ಇನ್ನೂ ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಅಲ್ಲದೆ ದೇವಸ್ಥಾನಕ್ಕೆ ತೆರಳಿ ದರ್ಶನ್ ಬಿಡುಗಡೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.