ಸುಂದರ ಸಂಸಾರಕ್ಕೆ ಪತಿಮಹಾಶಯ ಕೊಳ್ಳಿ ಇಟ್ಟು ತಾನು ಸಾಯುವ ನಾಟಕವಾಡಿ ಯಮನಾಗಿದ್ದಾನೆ.ಹತ್ತಾರು ವರ್ಷ ಸಂಸಾರ ಮಾಡಿದ್ದ ಕುಟುಂಬಕ್ಕೆ ಪತಿ ಕೊಳ್ಳಿ ಇಟ್ಟಿದ್ಯಾಕೆ ಅನ್ನೋದನ್ನ ಹೇಳ್ತಿವಿ ಈ ಸ್ಟೋರಿ ನೋಡಿ.. ಹೆಂಡತಿ ಮತ್ತು ಇಬ್ಬರ ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ಸಾಯಿಸಿರುವ ಹೃದಯ ವಿದ್ರಾಯಕ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಡ್ಡರಪಾಳ್ಯ ಗ್ರಾಮದಲ್ಲಿ ನಡೆದಿದೆ..ಕುಟುಂಬ ಸರ್ವನಾಶಕ್ಕೆ ಕ್ಯಾನ್ಸರ್ ರೋಗಿ ಪತಿಗಿದ್ದ ದುಶ್ಚಟಗಳೇ ಕಾರಣವಾಗಿದೆ ಎಂದು ಮೃತ ವಿಜಯ ಕುಟುಂಬಸ್ತರು ನಾಗೇಂದ್ರ ಕಡೆ ಬೆರಳು ಮಾಡುತ್ತಿದ್ದಾರೆ.
ಕೈಲಾಗದವನು ಮೈಪರಿಚಿಕೊಂಡ ಅನ್ನೋ ಹಾಗೇ ಸಂಸಾರ ಸಾಕೋದಕ್ಕೆ ಆಗದೇ ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ವಿಷಹಾಕಿ ಪತಿ ನಾಗೇಂದ್ರ ಕೊಲೆ ಮಾಡಿ ತಾನು ಕೈ ಕೋಯ್ದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ.ಘಟನೆಯಲ್ಲಿ ನಾಗೇಂದ್ರ ಪತ್ನಿ ವಿಜಯ ಹಾಗೂ ಇಬ್ಬರು ಹೆಣ್ಣು ಮಕ್ಕಳು ೭ ವರ್ಷದ ನಿಷಾ ೫ ವರ್ಷದ ದೀಕ್ಷಾ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ನಾಗೇಂದ್ರ ,ವಿಜಯ ದಂಪತಿ ೨೦೧೪ರಲ್ಲಿ ಮದುವೆ ಆಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ತನಗೆ .ಕ್ಯಾನ್ಸರ್ ಇರುವ ವಿಚಾರ ಗೋತ್ತಾಗುತ್ತಿದ್ದಂತೆ ಚಾಲಕನ ಕೆಲಸ ಬಿಟ್ಟು ಮನೆಯಲ್ಲಿ ಇದ್ದಾನೆ.ಹೆಂಡತಿ ವಿಜಯ ಮೇಡಿಕಲ್ ನಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದಳು.ಕೆಲಸ ಇಲ್ಲದೇ ಮನೆಯಲ್ಲಿದ್ದ ಗಂಡನಿಗೆ ದುಶ್ಚಟಗಳಿದ್ದರಿಂದ ಹಣಕ್ಕಾಗಿ ಪತ್ನಿಗೆ ಕಿರುಕುಳ ಕೊಡುತ್ತಿದ್ದ ನಾಗೇಂದ್ರ
ನಾಗೇಂದ್ರನ ಕಾಟಕ್ಕೆ ರೋಸಿ ಈ ಹಿಂದೆ ನಾಗೇಂದ್ರನ ವಿರುದ್ಧ ದೂರು ನೀಡಲಾಗಿತ್ತು.ನಿನ್ನೆ ರಾತ್ರಿ ಅನ್ನದಲ್ಲಿ ಹೆಂಡತಿ ಮಕ್ಕಳಿಗೆ ವಿಷಹಾಕಿ ಕೊಲೆ ಮಾಡಿದ್ದಾನೆ. ಬೆಳಗ್ಗೆ ವಿಜಯ ಸಹೋದರ ಮನೆ ಬಾಗಿಲು ತಗೆಸಲು ಹೋದಾಗ ಮನೆ ಬಾಗಿಲು ಓಪನ್ ಮಾಡಿಲ್ಲ.ಅನುಮಾನ ಬಂದು ಡೋರ್ ಹೊಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂದ ಕೋಣನಕುಂಟೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳ ಪರಿಶೀಲನೆವೇಳೆ ಆರೋಪಿ ನಾಗೇಂದ್ರ ಬದುಕಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಿದ್ದಾರೆ.ನಾಗೇಂದ್ರ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.