ಭೋಪಾಲ್: ಇತ್ತೀಚಿನ ದಿನಗಳಲ್ಲಿ ಪತಿ ಹಾಗೂ ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗುತ್ತಿದೆ. ಅಂತೆಯೇ ಇಲ್ಲೊಬ್ಬಳು ಪತ್ನಿ ತನ್ನ ಪತಿಯ ಗುಪ್ತಾಂಗಕ್ಕೆ ಬಿಸಿ ಬಿಸಿ ಎಣ್ಣೆ ಎರಚಿ ಗಾಯಗೊಳಿಸಿದ ಘಟನೆ ಮಧ್ಯಪ್ರದೇಶ (Madhyapradesh) ದ ಗ್ವಾಲಿಯರ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಪತ್ನಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇತ್ತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಡೆದಿದ್ದೇನು?: ಪತ್ನಿ ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ (Illicit Relationship) ಇಟ್ಟುಕೊಂಡಿದ್ದಳು. ಆಗಾಗ ಪ್ರಿಯತಮನಿಗೆ ಕಾಲ್, ಮೆಸೇಜ್ ಮಾಡಿಕೊಂಡು ಇದ್ದಳು. ಹೀಗೆ ಒಂದು ದಿನ ಆಕೆ ಫೋನ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ತನ್ನ ಪತಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.
ಈ ಸಂಬಂಧ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದಿದೆ. ಅಲ್ಲದೆ ಪತಿಯು ತನ್ನ ಪತ್ನಿ ಅಕ್ರಮ ಸಂಬಂಧವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿ, ಪತಿ ನಿದ್ದೆಗೆ ಜಾರಿದ ಬಳಿಕ ಮಧ್ಯರಾತ್ರಿ ಎಣ್ಣೆಯನ್ನು ಬಿಸಿ (Boiled Oil) ಮಾಡಿ ಪತಿಯ ಗುಪ್ತಾಂಗಕ್ಕೆ ಎರಚಿದ್ದಾಳೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಇತ್ತ ಗಾಯಗೊಂಡ ಸುನಿಲ್ ದಾಕಡ್ (32) ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.