ಬೆಂಗಳೂರು: ಆತ ಮನೆ ಕೆಲಸ ಮಾಡ್ಕೊಂಡು ಜೀವನ ಮಾಡ್ತಾ ಇದ್ದ.18 ಸಾವಿರ ಸಂಬಳ..ಈ ದುಡ್ಡನ್ನ ಊರಿಗೆ ಕಳುಹಿಸಿದ್ರೆ ಹೆಂಡತಿ ಯಾರಿಗೆ ಸಾಲುತ್ತೆ ಈ ಸಂಬಳ ಅಂತಾ ಕಿರಿಕ್ ಮಾಡ್ತಿದ್ಳು..ಹೆಚ್ಚಿನ ದುಡ್ಡು ಸಂಪಾದನೆ ಮಾಡು ಅಂತಾ ಗಲಾಟೆ ಮಾಡ್ತಿದ್ಳು ಅದಕ್ಕೆ .ತಾನು ಕೆಲಸ ಮಾಡ್ತಿದ್ದ ಮನೆಗೆ ಕನ್ನ ಹಾಕಿ ಜೈಲ್ ಪಲ್ ಆಗಿದಾನೆ ಅದೇನು ಅಂತ ಈ ಸ್ಟೋರಿ ನೋಡಿ.. ಈ ಫೋಟೊದಲ್ಲಿ ಕಾಣ್ತಿರೊನ ಹೆಸರು ಸುರೇಂದರ್ ಕುಮಾರ್.29 ವರ್ಷದ ಈತ ಬಿಹಾರ ಮೂಲದವ್ನು.
ಬೆಂಗಳೂರಲ್ಲಿ ಬಂದು ಬದುಕು ಕಟ್ಟಿಕೊಂಡಿದ್ದ..ಕಳೆದ ಒಂದೂವರೆ ವರ್ಷದಿಂದ ದೊಡ್ಡನೆಕ್ಕುಂದಿ ಬಳಿ ಇರುವ ಜೊನಾಷ ಪ್ಯಾರಡೈಸ್ ನಲ್ಲಿರುವ ವಿಲ್ಲಾ ಒಂದರಲ್ಲಿ ಮನೆಗೆಲಸದವನಾಗಿ ಕೆಲಸ ಮಾಡ್ತಿದ್ದ…ಇದೇ ಮನೆಯ ಮೇಲ್ಭಾಗದಲ್ಲಿ ಉಳಿದುಕೊಳ್ಳಲು ರೂಮ್ ಕೂಡ ನೀಡಲಾಗಿತ್ತು..ನಿಯತ್ತಿನಿಂದ ಕೆಲಸ ಕೂಡ ಮಾಡಿಕೊಂಡು ಹೋಗ್ತಿದ್ದ..ಆದರೆ ಆತನ ಪತ್ನಿ ನೀಡ್ತಿದ್ದ ಕಾಟಕ್ಕೆ ಅಡ್ಡದಾರಿ ಹಿಡಿದುಬಿಟ್ಟಿದ್ದ..
ಹೌದು ಸುರೇಂದರ್ ಗೆ 18 ಸಾವಿರ ಸಂಬಳವನ್ನು ಮಾಲೀಕ ನೀಡ್ತಿದ್ದ..ಸಣ್ಣ ಪುಟ್ಟ ತನ್ನ ಖರ್ಚು ನೋಡ್ಕೊಂಡು ಉಳಿದ ಹಣವನ್ನು ಬಿಹಾರದಲ್ಲಿರುವ ಪತ್ನಿಗೆ ಕಳುಹಿಸಿಕೊಡ್ತಿದ್ದ..ಆದರೆ ಪತ್ನಿಗೆ ಈ ಹಣ ಸಾಕಾಗ್ತಿರಲಿಲ್ಲ..ಬೆಂಗಳೂರಿಗೆ ಹೋಗಿ ಇಷ್ಟೇ ಹಣ ಸಂಪಾದನೆ ಮಾಡೋದ ನೀನು ಅಂತಾ ದಿನನಿತ್ಯ ಫೋನಲ್ಲಿ ಜಗಳ ಮಾಡ್ತಿದ್ಳು..ಅಲ್ಲದೆ ಜಾಸ್ತಿ ಹಣ ಸಂಪಾದನೆ ಮಾಡು ಅಂತಾ ಕಾಟ ಕೊಡ್ತಿದ್ಳು…ಇದರಿಂದ ಬೇಸೆತ್ತ ಆರೋಪಿ ಸರಿಯಾದ ಸಮಯಕ್ಕಾಗಿ ಕಾಯ್ತಿದ್ದ…ಮನೆ ಮಾಲೀಕರು ಏಪ್ರಿಲ್ 12 ರಂದು ಮುಂಬೈಗೆ ತೆರಳಿದ್ರು.
ಇದೇ ಸರಿಯಾದ ಸಮಯ ಎಂದುಕೊಂಡ ಆರೋಪಿ ಮನೆ ಬಾಗಿಲು ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ವಜ್ರದ ಒಡವೆ ಕದ್ದು ಪರಾರಿಯಾಗಿದ್ದ..ಮನೆಯವ್ರು ಏಪ್ರಿಲ್ 15 ರಂದು ಬಂದು ನೋಡಿದಾಗ ವಿಚಾರ ಗೊತ್ತಾಗಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಆಂದ್ರಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ…ಬಂಧಿತನಿಂದ 50 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ,99.5 ಗ್ರಾಂ ವಜ್ರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಅದೇನೆ ಆಗ್ಲಿ ಹೆಂಡತಿ ಮಾತು ಕೇಳಿ ಉಂಡ ಮನೆಗೆ ದ್ರೋಹ ಬಗೆದ ತಪ್ಪಿಗೆ ಜೈಲು ಸೇರುವಂತಾಗಿದೆ..