ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿ ಇಲ್ಲ. ಈ ಜೋಡಿ ಡಿವೋರ್ಸ್ ಪಡೆದುಕೊಳ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ತಮ್ಮ ಕುಟುಂಬದ ಮುದ್ದಿನ ಸೊಸೆಯ ಬಗ್ಗೆ ಈಗಾಗಲೇ ನಟ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಹಾಡಿ ಹೊಗಳಿದ್ದಾರೆ. ಆದರೆ ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರಿಗೆ ಐಶ್ವರ್ಯ ರೈ ಕಂಡರೆ ಹೊಟ್ಟೆ ಉರಿ ಎಂಬ ಸುದ್ದಿ ಸಾಕಷ್ಟು ಸಮಯದಿಂದ ಕೇಳಿ ಬಂದಿದೆ. ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲವಂತೆ. ಅಭಿಷೇಕ್ ಅವರು ತಮ್ಮ ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು. ಅಭಿಷೇಕ್ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ, ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಐಶ್ವರ್ಯರನ್ನು ಕಂಡರೆ ಅವರಿಗೆ ಆಗಿ ಬರುವುದಿಲ್ಲ ಎನ್ನಲಾಗುತ್ತಿದೆ.
ಅಮಿತಾಭ್ ಬಚ್ಚನ್ ಮೊಮ್ಮಗಳು, ಶ್ವೇತಾ ಅವರ ಪುತ್ರಿ ನವ್ಯಾ ನವೇಲಿ ಕಾಸ್ಮೆಟಿಕ್ ಬ್ರಾಂಡ್ L’Oréal ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅದರ ವಿಡಿಯೋಗಳನ್ನು ಐಶ್ವರ್ಯ ರೈ ಅವರನ್ನು ಬಿಟ್ಟು ಉಳಿದವರಿಗೆಲ್ಲಾ ಟ್ಯಾಗ್ ಮಾಡಿದ್ದರು! ಆಗಲೇ ನವ್ಯಾಗೂ ಐಶ್ವರ್ಯ ಅವರನ್ನು ಕಂಡರೆ ಆಗುತ್ತಿಲ್ಲ ಎಂದೇ ಹೇಳಲಾಗಿತ್ತು. ಇದಕ್ಕೀಗ ಪುಷ್ಟಿ ಕೊಡಲು ಎಂಬಂತೆ ಇನ್ನೊಂದು ಹೇಳಿಕೆ ನೀಡಿದ್ದು, ಇದೀಗ ಸಕತ್ ಸದ್ದು ಮಾಡುತ್ತಿದೆ.
ನವ್ಯಾ ‘ವಾಟ್ ದಿ ಹೆಲ್ ನವ್ಯಾ’ ಹೆಸರಿನ ಪಾಡ್ಕಾಸ್ಟ್ ಆರಂಭಿಸಿದ್ದು, ಅದರಲ್ಲಿ ಅತ್ತೆ ಐಶ್ವರ್ಯ ವಿರುದ್ಧದ ಹೇಳಿಕೆ ನೀಡಿದ್ದಾರೆ. ಈ ಷೋಗೆ ನವ್ಯಾ ತಾಯಿ ಶ್ವೇತಾ ಹಾಗೂ ಅಜ್ಜಿ ಜಯಾ ಬಚ್ಚನ್ ಆಗಮಿಸಿದ್ದರು. ಈ ವೇಳೆ ನಡೆದ ಮಾತುಕತೆಯಲ್ಲಿ, ಷೋಗೆ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅಥವಾ ಅಮಿತಾಭ್ ಬಚ್ಚನ್ ಅವರನ್ನು ಕರೆಸುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದು ಎರಡನೇ ಸೀಸನ್ ಬಹುಶಃ ಮೂರನೇ ಸೀಸನ್ ಇದ್ದರೆ ನಾನು ಅವವರನ್ನು ಆಮಂತ್ರಿಸುತ್ತೇನೆ. ಕೇವಲ ಕುಟುಂಬದವರು ಮಾತ್ರವಲ್ಲ ಕುಟುಂಬದ ಹೊರಗಿನವರಿಗೂ ಆಮಂತ್ರಣ ನೀಡುತ್ತೇನೆ. ಅದು ಸಖತ್ ಫನ್ ಆಗಿರುತ್ತದೆ. ಬೇರೆ ಬೇರೆ ಕ್ಷೇತ್ರದವರ ಅನುಭವ ತಿಳಿದುಕೊಳ್ಳಲು ಖುಷಿ ಇದೆ’ ಎಂದಿದ್ದಾರೆ.
ನವ್ಯಾ ಸಹಜವಾಗಿಯೇ ಹೇಳಿದ್ದರು ಅದು ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ. ಹೊರಗಿನವರು ಎಂದರೆ ನವ್ಯಾ ಹೇಳಿರುವುದು ಐಶ್ವರ್ಯ ರೈ ಕುರಿತು ಎನ್ನಲಾಗುತ್ತಿದೆ. ಈ ಮೊದಲು ನಡೆದಿರುವ ಹಲವಾರು ಘಟನೆಗಳನ್ನು ನೆನಪಿಸಿಕೊಂಡಿರುವ ಐಶ್ ಫ್ಯಾನ್ಸ್, ನವ್ಯಾ ಹೇಳಿರುವುದು ಇದೇ ಉದ್ದೇಶಕ್ಕೆ ಎನ್ನುತ್ತಿದ್ದಾರೆ.