ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಚಿವ ಸಂಪುಟ ನಿರ್ಧಾರ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಈ ವಿಚಾರವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ.
ಲೋಕಸಭೆ, ಜಿಲ್ಲಾ ಪಂಚಾಯತ್ ಚುನಾವಣೆಗೆ ಈ ವಿಚಾರ ತೆಗೆದುಕೊಂಡು ಹೋಗುತ್ತೇವೆ. ಜನರ ಮುಂದೆ ಈ ವಿಚಾರ ಇಡುತ್ತೇವೆ. ನಿಮಗೆ ದೇಶ ಭಕ್ತಿ ಇದ್ದರೆ, ತಾಕತ್ ಇದ್ದರೆ ಅಂಬೇಡ್ಕರ್ ಕಾಂಗ್ರೆಸ್ ಬಗ್ಗೆ ಏನು ಹೇಳಿದರು ಅದನ್ನು ಪ್ರಕಟಿಸಿ.
ಸಾವರ್ಕರ್ ಪಾಠ ಓದಿದರೆ ಮಕ್ಕಳು ದೇಶ ದ್ರೋಹಿ ಆಗುತ್ತಾರಾ? ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್ನವರು ರಣ ಹೇಡಿಗಳು. ಮಾತ್ರವಲ್ಲದೆ, ದೇಶದ್ರೋಹಿಗಳು. ಟಿಪ್ಪು ಪಾಠ ಕಾಂಗ್ರೆಸ್ನವರಿಗೆ ಬೇಕು. ಏಕೆಂದರೆ ತುಷ್ಟಿಕರಣ ಮಾಡಲು ಎಂದು ಆಕ್ರೋಶ ಹೊರಹಾಕಿದರು.