ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ಇಂದೆಂದಿಗಿಂತಲೂ ತೀವ್ರವಾದ ಬರ ಕಾಣಿಸಿಕೊಂಡಿದ್ದು, ಜನ ಹಾಗೂ ರೈತರು ತೀವ್ರವಾದ ಸಂಕಷ್ಟದಲ್ಲಿ ಇದ್ದಾರೆ.
ಈ ಬಾರಿ ಎದುರಾಗಿರುವ ಬರದಿಂದಾಗಿ ದೊಡ್ಡಮಟ್ಟದಲ್ಲಿ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.ಈ ಅವಧಿಯಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಸಹ ರೈತರನ್ನು ಸಮರ್ಪಕವಾಗಿ ಕೈ ಹಿಡಿದಿಲ್ಲ.ಇದೇ ಸಂದರ್ಭದಲ್ಲಿ ರೈತರ ಸಾಲ ಮನ್ನಾ ವಿಚಾರ ಮುನ್ನೆಲೆಗೆ ಬಂದಿದೆ.
ಇನ್ನು ಕರ್ನಾಟಕದಲ್ಲಿ ಈ ಬಾರಿ ಸಾಲ ಮನ್ನಾ ಆಗಲಿದೆಯೇ ಎನ್ನುವುದನ್ನು ಬಹುದೊಡ್ಡ ಚರ್ಚೆಯಾಗುತ್ತಿದೆ.
ಕಳೆದ ಬಾರಿಗಿಂತ ಈ ಬಾರಿ ರೈತರು ಹೆಚ್ಚು ಕಷ್ಟದಲ್ಲಿ ಇರುವುದರಿಂದಾಗಿ ಈ ಬಾರಿ ಸಾಲ ಮನ್ನಾ ಮಾಡಲೇಬೇಕು ಎಂದು
ರೈತರು ಸೇರಿದಂತೆ ವಿರೋಧ ಪಕ್ಷಗಳು ಸಹ ಆಗ್ರಹಿಸಿವೆ. ಹೀಗಾಗಿ, ಈ ಬಾರಿ ಸಾಲ ಮನ್ನಾ ಆಗಲಿದೆಯೇ ಎನ್ನುವುದು ಭಾರೀ ಕುತೂಹಲವನ್ನು ಮೂಡಿಸಿದೆ.ಆದರೆ, ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಸರ್ಕಾರವು ಬಿಗಿ ಆರ್ಥಿಕ ನೀತಿಯನ್ನು ಅನುಸರಿಸುತ್ತಿದೆ.ಅಲ್ಲದೇ ಈಗಾಗಲೇ ರಾಜ್ಯ ಸರ್ಕಾರವು ಭಾರೀ ಮೊತ್ತವನ್ನು ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ವಿನಿಯೋಗಿಸಿರುವುದರಿಂದಾಗಿ ರೈತರ ಸಾಲ ಮನ್ನಾ ಮಾಡಲಿದೆಯೇ ಎನ್ನುವ ಪ್ರಶ್ನೆಯೂ ಇದೆ.
ಇನ್ನು ರಾಜ್ಯದಲ್ಲಿ ಲೋಕಸಭೆ ಚುನಾವಣೆಯೂ ಸಮೀಪದಲ್ಲಿ ಇರುವುದರಿಂದಾಗಿ ಈ ಬಾರಿ ರೈತರ ಸಾಲ ಮನ್ನಾ ಆಗಲಿದೆಯೇ ಎನ್ನುವ ಕುತೂಹಲ ಸಾಕಷ್ಟು ಇದೆ.ಆದರೆ, ಇದಕ್ಕೆ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ.ಆದರೆ, ಇನ್ನು ಕೆಲವೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆಯೂ ಸಹ ಇರುವುದರಿಂದ ಈ ಬಾರಿಸಾಲ ಮನ್ನಾ ಆಗಲಿದೆಯೇ ಎನ್ನುವುದು ಸಹ ಕುತೂಹಲ ಇದ್ದೇ ಇದೆ.