ಬಿಗ್ ಬಸ್ ಸೀಸನ್ 11 ಗ್ರ್ಯಾಂಡ್ ಆರಂಭವಾಗಿದೆ. ಕಿರುತೆರೆ, ಹಿರಿತೆರೆ, ಕಾಮನ್ ಪೀಪಲ್, ಕಾಮಿಡಿ ಆರ್ಟೀಸ್ಟ್ ಸೇರಿದಂತೆ ಸಾಕಷ್ಟು ಮಂದಿ ದೊಡ್ಮನೆ ಒಳಗೆ ಕಾಲಿಟ್ಟಿದ್ದಾರೆ. ಅಂದ ಹಾಗೆ ಈ ಭಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ಈ ಸುಂದರಿ ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೊಮ್ಮೆ ಹಾಕಲ್ವಂತೆ. ಬಿಗ್ ಬಾಸ್ ಮನೆಗೆ ಹೋಗುವಾಗ ಒಂದು ಸೂಟ್ ಕೇಸ್ ತುಂಬ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಇದರಲ್ಲಿ ತೆಗೆದುಕೊಂಡು ಹೋದ ಬಟ್ಟೆಗಳು ಎಷ್ಟು ದಿನಕ್ಕೆ ಸಾಕಗುತ್ತೆ ಅನ್ನೋ ಪ್ರಶ್ನೆ ಶುರುವಾಗುತ್ತೆ. ಆದರೆ ಈ ನಟಿ ಅಲ್ಲಿ ಹೇಗೆತ್ಯಾರೆ ಅನ್ನೋ ಕುತೂಹಲ ಇದೆ. ಅವರು ಒಂದ ಸಲ ಹಾಕಿದ ಡ್ರೆಸ್ ಇನ್ನೊಂದು ಸಲ ಹಾಕೋದೇ ಇಲ್ವಂತೆ.
ಗೀತಾ ಧಾರವಾಹಿ ಮೂಲಕ ಖ್ಯಾತಿ ಘಳಿಸಿದವರು ನಟಿ ಭವ್ಯಾ ಗೌಡ. 3-4 ವರ್ಷಗಳ ಕಾಲ ಸುದೀರ್ಘವಾಗಿ ಪ್ರಸಾರ ಕಂಡಿದ್ದ ಸೀರಿಯಲ್ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಒಟ್ಟು 1107 ಸಂಚಿಕೆಗಳು ಕೂಡಾ ಪ್ರಸಾರವಾಗಿದ್ದವು. ಒಂದಷ್ಟು ಸಲ ಗ್ರಾಫಿಕ್ಸ್ ವಿಚಾರವಾಗಿ ಈ ಸೀರಿಯಲ್ ಟ್ರೋಲ್ ಕೂಡಾ ಆಗಿತ್ತು.
ಈ ಸೀರಿಯಲ್ ವೇಳೆ ಇಷ್ಟೊಂದು ಸಂಚಿಕೆಗಳಲ್ಲಿ ನಟಿ ಒಮ್ಮೆಯೂ ಹಾಕಿದ ಬಟ್ಟೆಯನ್ನ ಮತ್ತೊಮ್ಮೆ ರಿಪೀಟ್ ಮಾಡಿಲ್ವಂತೆ ಭವ್ಯಾ ಗೌಡ. ಅವರು ಇದನ್ನು ಹಿಂದೊಮ್ಮೆ ರಿವೀಲ್ ಮಾಡಿದ್ದರು. ನನ್ನಕ್ಕ ನನಗಾಗಿ ಬಟ್ಟೆಗಳನ್ನು ರೆಡಿ ಮಾಡಿಡುತ್ತಿದ್ದಳು ಎಂದಿದ್ದರು.
ತನ್ನ ಅಕ್ಕ ಬಟ್ಟೆ ಡಿಸೈನ್ ಮಾಡುವವರಾಗಿದ್ದರು. ನನಗಾಗಿ ಒಂದು ಕೋಣೆ ತುಂಬಾ ಬಟ್ಟೆ ರೆಡಿ ಮಾಡಿಟ್ಟಿದ್ದರು ಎಂದಿದ್ದರು ಭವ್ಯಾ ಗೌಡ. ಅವರ ಅಕ್ಕ ಅವರನ್ನು ಅಗಲಿದ್ದಾರೆ. ಭವ್ಯಾ ಗೌಡ ಮಂಡ್ಯದ ನಾಗಮಂಗಲದವರಾಗಿದ್ದು ಟಿಕ್ ಟಾಕ್ ವಿಡಿಯೋ ಮೂಲಕ ಖ್ಯಾತಿ ಘಳಿಸಿದ್ದರು.
ಗಗನಸಖಿ ಆಗಬೇಕು ಅನ್ನೋದು ಭವ್ಯಾ ಆಸೆ ಆಗಿದ್ರೆ ಮಗಳು ಏರ್ ಹೋಸ್ಟೆಸ್ ಆಗಬೇಕೆನ್ನುವುದು ಅಪ್ಪ-ಅಮ್ಮನ ಆಸೆಯಾಗಿತ್ತು. ಸದ್ಯ ನಟಿ ಗೀತಾ ಸೀರಿಯಲ್ ಮೂಲಕ ಖ್ಯಾತಿ ಕೂಡಾ ಗಳಿಸಿಕೊಂಡು ಈಗ ಬಿಗ್ಬಾಸ್ ಮನೆಗೂ ಬಂದಿದ್ದಾರೆ.
ಸೀರಿಯಲ್ ನಟಿ ಭವ್ಯ ಗೌಡ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮೊದಲ ಅಭ್ಯರ್ಥಿಯಾಗಿ ನಟಿ ಭವ್ಯ ಗೌಡ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಕರ್ನಾಟಕದ ಗೀತಾ ಆಗಿದ್ದೆ. ಇನ್ಮುಂದೆ ಬಿಗ್ ಬಾಸ್ನಲ್ಲಿ ಭವ್ಯ ಗೌಡ ಏನು ಅಂತ ತೋರಿಸುವೆ ಎಂದು ನಟಿ ಹೇಳಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಿರುತೆರೆ ನಟಿ. ಇವರು 1996ರ ನವೆಂಬರ್ 17ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿಕಾಂ ಮುಗಿಸಿದ್ದ ಇವರಿಗೆ ಗಗನಸಖಿಯಾಗಬೇಕೆಂಬ ಕನಸು ಆಸೆಯಿತ್ತು. ಭವ್ಯಾ ಅವರ ತಂದೆ-ತಾಯಿಗೆ ಮಗಳನ್ನು ನಟಿಯಾಗಿ ನೋಡಬೇಕೆಂಬ ಆಸೆ ಇತ್ತಂತೆ. ಅದ್ರಂತೆ ಭವ್ಯಾ ಗೌಡ ನಟಿಯಾಗಿದ್ದಾರೆ. ಕಿರುತೆರೆ ಕಾಲಿಟ್ಟ ನಟಿ ಫೇಮಸ್ ಆಗಿದ್ದಾರೆ.