ಬೆಂಗಳೂರು: ಗ್ರಾಹಕರಿಗೆ ಬಿಗ್ ಶಾಕ್ ಕೊಡಲು ಬಮೂಲ್ ಮುಂದಾಗಿದ್ದು ಹಾಲಿನ ದರ ಪರಿಷ್ಕರಿಸುವಂತೆ ಪಟ್ಟು ಹಿಡಿದಿದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಬಮೂಲ್ ಸರ್ಕಾರದ ಬಳಿ ಡಿಮ್ಯಾಂಡ್ ಮಾಡ್ತಿದೆ.
ಬಿಜೆಪಿ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಲಿನ ದರ ಏರಿಸದಂತೆ ಸೂಚನೆ ನೀಡಿದ್ದರು. ಕೆಲ ತಿಂಗಳು ಕಾಲ ನಿಶ್ಚಿಂತರಾಗಿದ್ದ ಜನತೆ, ಇದೀಗ ಮತ್ತೊಮ್ಮೆ ಹಾಲಿನ ದರದ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಹಾಲಿನ ದರ ಏರಿಸಲು ಬಮೂಲ್ (BaMUL, Bangalore Milk Union Limited) ಚಿಂತನೆ ನಡೆಸುತ್ತಿದ್ದು ದರ ಪರಿಷ್ಕರಿಸುವಂತೆ ಪಟ್ಟು ಹಿಡಿದಿದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟ ಪಟ್ಟು ಹಿಡಿದಿದ್ದು ಇದೀಗ ಪಶು ಸಂಗೋಪನೆ ಸಹಕಾರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಆದರೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲು ಇನ್ನೂ ಸಮಯ ಸಿಗದ ಕಾರಣ ನಾಳೆ ಅಥವಾ ನಾಡಿದ್ದು ಭೇಟಿ ಮಾಡಿ ಸಲ್ಲಿಸಲು ಬಮೂಲ್ ಅಧ್ಯಕ್ಷ ಚಿಂತನೆ ಮಾಡಿದ್ದಾರೆ.
ಪ್ರತೀ ಲೀಟರ್ ಹಾಲಿನ ದರವನ್ನು 5 ರೂ. ಏರಿಕೆ ಮಾಡುವಂತೆ ಪ್ರಸ್ತಾವನೆ ಇದ್ದು ಈ ಬಗ್ಗೆ ಹಾಲು ಒಕ್ಕೂಟ ಪಟ್ಟು ಹಿಡಿದು ಕೆಲಸ ಮಾಡುತ್ತಿದೆ.