ಕೆಲವೊಬ್ಬರು ಹೆಚ್ಚಾಗಿ ಸಾಲ ಮಾಡಿ ದಿನಸಿ ಖರೀದಿಸುವುದೋ ಅಥವಾ ಸಾಲ ಮಾಡಿ ಚಹಾ, ಸಿಗರೇಟ್ ಖರೀದಿಸುವುದು ಮಾಡುತ್ತಿರುತ್ತಾರೆ. ಹೀಗೆ ತೆಗೆದುಕೊಂಡ ದಿನಸಿಯ ಹಣವನ್ನು ಕೆಲವೊಬ್ಬರು ಎಷ್ಟೇ ವರ್ಷವಾದರೂ ಪಾವತಿಸದೆ ಅಂಗಡಿ ವ್ಯಾಪಾರಿಗಳಿಗನ್ನು ಆಟವಾಡಿಸುತ್ತಿರುತ್ತಾರೆ. ಹೀಗೆ ಸಾಲ ಕೇಳುವವರ ಕಾಟದಿಂದ ತಪ್ಪಿಸಿಕೊಳ್ಳಲು ಕೆಲವೊಂದು ಬುದ್ಧಿವಂತ ವ್ಯಾಪಾರಿಗಳು ಇಲ್ಲಿ ಸಾಲ ಕೊಡಲಾಗುವುದಿಲ್ಲ, ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ದೇವರಿದ್ದಂತೆ ದೇವರಿಗೆ ಸಾಲ ಕೊಡುವಷ್ಟು ನಾನು ದೊಡ್ಡವನಲ್ಲ ಎಂಬಿತ್ಯಾದಿ ಬೋರ್ಡ್ ಗಳನ್ನು ಅಂಗಡಿಯ ಮುಂದೆ ಹಾಕಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಬೀದಿ ಬದಿ ವ್ಯಾಪಾರಿ ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೆ ಇಲ್ಲಿ ಸಾಲ ಕೊಡಲಾಗುವುದಿಲ್ಲ ಎಂಬ ಬೋರ್ಡ್ ಅನ್ನು ಹಾಕಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೆಚ್ಚಿನವರಿಗೆ ಸಂಜೆ ಹೊತ್ತು ಬೀದಿ ಬದಿ ಅಂಗಡಿಗಳಿಗೆ ಹೋಗಿ ಅಲ್ಲಿ ಬಿಸಿ ಬಿಸಿ ತಿನಿಸುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಅದರಲ್ಲಿ ಕೆಲವರು ದಿನ ಯಾರಪ್ಪಾ ಹಣ ಕೊಡ್ತಾರೆ ಎಂದು ಸಾಲ ಮಾಡಿ ಬಿಸಿ ಬಿಸಿ ಬಜ್ಜಿ, ಬೋಂಡಾ ತಿಂದು ತಿಂಗಳ ಕೊನೆಯಲ್ಲಿ ಪಾವತಿ ಮಾಡುತ್ತಾರೆ. ಇಂತಹ ಸಾಲ ಕೇಳುವವರ ಕಾಟದಿಂದ ತಪ್ಪಿಸಿಕೊಳ್ಳಲು ಬೀದಿ ಬದಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯ ಮುಂದೆ ʼರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗುವವರೆಗೆ ಇಲ್ಲಿ ಸಾಲ ನೀಡಲಾಗುವುದಿಲ್ಲʼ ಎಂಬ ಬೋರ್ಡ್ ಹಾಕಿಕೊಂಡಿದ್ದಾರೆ.
ಆರು ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯ ಮುಂದೆ ʼಸಾಲ ಕೇಳುವಂತಿಲ್ಲ; ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುವವರೆ ಇಲ್ಲಿ ಸಾಲವನ್ನು ನೀಡಲಾಗುವುದಿಲ್ಲʼ ಎಂಬ ಬರಹವನ್ನು ಬರೆದಿರುವ ಬೋರ್ಡ್ ಒಂದನ್ನು ನೇತು ಹಾಕಿರುವ ದೃಶ್ಯವನ್ನು ಕಾಣಬಹುದು.