ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ತಾವು ಮಾಡಿದ್ದ ಲಂಚದ ಆರೋಪಕ್ಕೆ ಸೂಕ್ತವಾದ ದಾಖಲೆಯನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಮಾಡಿರುವ ಆರೋಪಗಳಿಗೆ ಪೂರಕವಾಗಿ ದಾಖಲೆಗಳು ನನ್ನ ಬಳಿ ಇವೆ. ಅವು ಸಚಿವರೊಬ್ಬರ ಲಂಚಗುಳಿತನಕ್ಕೆ ಸಂಬಂಧಿಸಿದ ದಾಖಲೆಗಳು. ನಾನು ಆ ದಾಖಲೆಗಳನ್ನು ಬಿಡುಗಡೆ ಮಾಡಲು ಸಿದ್ಧ. ಆದರೆ, ಆ ದಾಖಲೆಗಳನ್ನು ನೋಡಿದ ನಂತರ ಆ ಸಚಿವರನ್ನು ಸಂಪುಟದಿಂದ ವಜಾ ಮಾಡುವಿರಾ’’ ಎಂದು ಅವರು ಪ್ರತಿಸವಾಲು ಹಾಕಿದ್ದಾರೆ.
ನನ್ನ ಬಳಿಯಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ನಿಮ್ಮ (ಕಾಂಗ್ರೆಸ್) ಸರ್ಕಾರ ಇರುತ್ತಾ ಎಂಬುದನ್ನು ಯೋಚನೆ ಮಾಡಿ. ಇನ್ನೂ ಹೊಸದಾಗಿ ಸರ್ಕಾರ ರಚಿಸಿದ್ದಾರೆ, ಸ್ವಲ್ಪ ದಿನ ಈ ಸರ್ಕಾರ ಕೆಲಸ ಮಾಡಲಿ ಎಂಬ ಉದ್ದೇಶದಿಂದ ನಾನು ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ’’ ಎಂದೂ ಸಹ ಅವರು ಗುಡುಗಿದ್ದಾರೆ