ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ನಡೆಯುತ್ತಿದ್ದ ಚುನಾವಣಾ ಪೂರ್ವ ರ್ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಅಮೆರಿಕಾ ಮಾತ್ರವಲ್ಲದೆ ವಿಶ್ವದಾದ್ಯಂತ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಚೀನಾದ ಕಂಪನಿಯೊಂದು ಟ್ರಂಪ್ ಮೇಲಿನ ದಾಳಿ ಫೋಟೋವನ್ನು ಟೀ–ಶರ್ಟ್ ಮೇಲೆ ಮುದ್ರಿಸಿ ಮಾರಾಟ ಮಾಡುತ್ತಿದೆ. ಅಚ್ಚರಿಯ ವಿಷಯ ಏನೆಂದರೆ ಗುಂಡು ಹಾರಿಸಿದ ಕೇವಲ 2 ಗಂಟೆಗಳಲ್ಲಿ ಹತ್ಯೆ ಪ್ರಯತ್ನದಿಂದ ತಪ್ಪಿಸಿಕೊಂಡ ಫೋಟೋ ಇರುವ ಟೀ–ಶರ್ಟ್ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.
ಜನಪ್ರಿಯ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಟಾವೊಬಾವೊದಲ್ಲಿ ಟೀ-ಶರ್ಟ್ಗಳು ಮಾರಟಕ್ಕಿವೆ ಎಂದು ಘೋಷಿಸಲಾಯಿತು.ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಟೀ-ಶರ್ಟ್ಗಾಗಿ ಚೀನಾ ಮತ್ತು ಅಮೆರಿಕದಿಂದ ಸುಮಾರು 2000 ಆರ್ಡರ್ಗಳು ಬಂದಿವೆ. ನಾವು ಶೂಟ್ ಮಾಡಿದ ಸುದ್ದಿಯನ್ನು ನೋಡಿದ ತಕ್ಷಣ ಟೀ-ಶರ್ಟ್ಗಳು ಮಾಟಕ್ಕಿವೆ ಎಂದು ಘೋಷಿಸಿದೆವು. ಅವುಗಳನ್ನು ಮುದ್ರಿಸುವುದಕ್ಕೂ ಮೊದಲೇ 2,000ಕ್ಕೂ ಹೆಚ್ಚು ಆರ್ಡರ್ಗಳು ಬಂದಿವೆ ಎಂದು ವ್ಯಾಪಾರಿ ಲಿ ಜಿನ್ವೀ ಹೇಳಿದ್ದಾರೆ.
ಟೀ-ಶರ್ಟ್ ಮೇಲೆ ಟ್ರಂಪ್ ಅವರ ಮೇಲಿನ ದಾಳಿಯ ಚಿತ್ರವಿದ್ದು, ಅದರಲ್ಲಿ ‘ಶೂಟಿಂಗ್ ನನ್ನನ್ನು ಬಲಪಡಿಸುತ್ತದೆ’ ಎಂದು ಬರೆಯಲಾಗಿದೆ. ದಾಳಿಯ ಫೋಟೋ ಡೌನ್ಲೋಡ್ ಮಾಡಿದ ಕಂಪನಿಯವರು ಅದನ್ನು ಟೀ-ಶರ್ಟ್ ಮೇಲೆ ಮುದ್ರಿಸಿ ಮಾರಟ ಮಾಡಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಭದ್ರತಾ ಸಿಬ್ಬಂದಿ ದಾಳಿಕೋರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿ ಬಳಿಕ ಗಾಯಗೊಂಡಿದ್ದರೂ ಟ್ರಂಪ್ ‘ಹೋರಾಟ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಈ ಘಟನೆಯಲ್ಲಿ ಟ್ರಂಪ್ ಅವರ ಕಿವಿಗೆ ಬುಲೆಟ್ನಿಂದ ಗಾಯವಾಗಿತ್ತು. ಕಿವಿಗೆ ಗುಂಡು ತಗುಲಿ ಮುಖದಿಂದ ರಕ್ತ ಹರಿಯುತ್ತಿದ್ದ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಸದ್ಯ ಟ್ರಂಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಂತಕನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.