ಮಹಿಳಾ ಅಧಿಕಾರಿಯೊಬ್ಬರು ಕೈದಿಯ ಜೊತೆ ಜೈಲಿನಲ್ಲಿ ಸಂಬೋಗದಲ್ಲಿ ತೊಡಗಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನೈಋತ್ಯ ಲಂಡನ್ನ ಹೆಚ್ಎಂಪಿ ವಾಂಡ್ಸ್ವರ್ತ್ ಜೈಲಿನಲ್ಲಿ ನಡೆದಿದೆ.
30 ವರ್ಷದ ಲಿಂಡಾ ಡಿ ಸೌಸಾ ಅಬ್ರೂ ಪಶ್ಚಿಮ ಲಂಡನ್ನ ಫುಲ್ಹಾಮ್ನಲ್ಲಿ ವಾಸಿಸುತ್ತಿದ್ದಾರೆ. ಅವರ ಸಾರ್ವಜನಿಕ ಕಚೇರಿಯಲ್ಲಿ ಈ ದುಷ್ಕೃತ್ಯ ನಡೆಸಿದ ಆರೋಪ ಎದುರಿಸುತ್ತಿದ್ದು, ಅವರನ್ನು ಆಕ್ಸ್ಬ್ರಿಡ್ಜ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಜೈಲಿನೊಳಗೆ ಚಿತ್ರೀಕರಿಸಿದ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡ ನಂತರ ಮೆಟ್ರೋಪಾಲಿಟನ್ ಪೊಲೀಸರು ಶುಕ್ರವಾರ ವಿಚಾರಣೆಯನ್ನು ಪ್ರಾರಂಭಿಸಿದರು. ವರದಿಗಳ ಪ್ರಕಾರ, ಈ ಘಟನೆ ಸಂಭವಿಸುವ ಮೊದಲು ಆ ಮಹಿಳಾ ಜೈಲಧಿಕಾರಿಯು ಆರಂಭದಲ್ಲಿ ಯೂನಿಫಾರಂ ಧರಿಸಿದ್ದರು. ಡ್ಯೂಟಿಯಲ್ಲಿರುವಾಗಲೇ ಕೈದಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದು ಈ ವಿಡಿಯೋ ಮೂಲಕ ಬಹಿರಂಗವಾಗಿದೆ.
1851ರಲ್ಲಿ ಸ್ಥಾಪಿಸಲಾದ ವಿಕ್ಟೋರಿಯನ್ ಯುಗದ HMP ವಾಂಡ್ಸ್ವರ್ತ್ ಜೈಲು ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಮಾಣದ ಕೈದಿಗಳು ಮತ್ತು ಹದಗೆಡುತ್ತಿರುವ ಪರಿಸ್ಥಿತಿಗಳಂತಹ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ಇದು ವ್ಯಾಪಕ ಹಿಂಸಾಚಾರ, ಸೊಳ್ಳೆಗಳ ಕಾಟ ಮತ್ತು ತೀವ್ರ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಹೊಂದಿದೆ. ಈ ಜೈಲು ಪ್ರಸ್ತುತ ಅದರ ಉದ್ದೇಶಿತ ಸಾಮರ್ಥ್ಯಕ್ಕಿಂತ ಶೇ. 163ರಷ್ಟು ಹೆಚ್ಚು ಕೈದಿಗಳನ್ನು ಇರಿಸಿಕೊಂಡಿದೆ. ಇಲ್ಲಿ 1,500ಕ್ಕೂ ಹೆಚ್ಚು ಕೈದಿಗಳಿದ್ದಾರೆ.