ಮಹಿಳೆಯರಿಗೆ ತಾಲಿಬಾನ್ ಸರ್ಕಾರ ಈಗಾಗಲೇ ಸಾಕಷ್ಟು ನಿಷೇಧ ಹೇರಿದೆ. ಶಿಕ್ಷಣ, ಉದ್ಯೋಗ, ಉಡುಗೆ-ತೊಡುಗೆಯೂ ಸೇರಿ ಈಗಾಗಲೇ ಸ್ತ್ರೀಯರ ಬಹುತೇಕ ಸ್ವಾತಂತ್ರ್ಯ ಕಸಿದಿರುವ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಇದೀಗ, ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಎದುರು ಜೋರಾಗಿ ಕುರಾನ್ ಪಠಿಸಬಾರದು. ಸುಶ್ರಾವ್ಯವಾಗಿ ಅಜಾನ್ ಹೇಳಬಾರದು ಎಂದು ನಿಷೇಧ ಹೇರಿದೆ.
ಈ ಮೂಲಕ ಮಹಿಳೆಯರು ಸಂಗೀತವನ್ನು ಆಸ್ವಾದಿಸದಂತೆ ಖಾತರಿ ಪಡಿಸಿಕೊಳ್ಳಲಾಗುವುದು ಎಂದು ಹೇಳಿಕೊಂಡಿದೆ.
ಹೊಸ ತಾಕೀತಿನ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಮಾತನಾಡಿದ್ದು, “ಇಸ್ಲಾಂನಲ್ಲಿ ಮಹಿಳೆಯರ ಧ್ವನಿಯನ್ನು “ಅವ್ರಾ’ (ಗೌಪ್ಯ) ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಧ್ವನಿ ಎತ್ತರಿಸುವಂತಿಲ್ಲ. ಜತೆಗೆ ತಕಿರ್ (ಅಲ್ಲಾ ಹು ಅಕ್ಬರ್) ಅಥವಾ ಅಜಾನ್ ಅನ್ನು ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆ ಮುಂದೆ ಜೋರಾಗಿ ಪಠಿಸಿದರೆ ಸುಶ್ರಾವ್ಯವಾಗಿ ಹಾಡುವುದು ಅಭ್ಯಾಸವಾಗಿಬಿಡುತ್ತದೆ. ಮಹಿಳೆಯರ ಧ್ವನಿಯು ಅವ್ರಾ ಆದ ಕಾರಣ ಇದು ನಿಷಿದ್ಧ. ಹಾಗಾಗಿ ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆಯ ಮುಂದೆ ಜೋರಾಗಿ ಕುರಾನ್ ಪಠಿಸುವುದು, ಪ್ರಾರ್ಥಿಸುವು ದನ್ನು ನಿಷೇಧಿಸಲಾಗಿದೆ’ ಎಂದಿದ್ದಾರೆ.