ದಕ್ಷಿಣ ಅಮೇರಿಕ: ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಶವ ಪೆಟ್ಟಿಗೆಯಲ್ಲಿ ಇರಿಸಿ ಇನ್ನೇನು ಅಂತ್ಯಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿ ಮೃತ ಮಹಿಳೆಯೇ ಶವಪೆಟ್ಟಿಗೆಯ ಬಾಗಿಲು ಬಡಿದ ಘಟನೆ ದಕ್ಷಿಣ ಅಮೇರಿಕದ ಈಕ್ವೆಡಾರ್ ಪ್ರದೇಶದಲ್ಲಿ ನಡೆದಿದೆ.
76 ವರ್ಷದ ಬೆಲ್ಲಾ ಮೊಂಟೊಯಾ ಎಂಬ ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಏಳು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದರು ಮಹಿಳೆ ಜೂನ್ 8 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇದರಿಂದ ಆಕೆಯ ಕುಟುಂಬಸ್ಥರು ಅಂತ್ಯಕ್ರಿಯೆಗೆ ತಯಾರಿ ನಡಿಸಿದ್ದಾರೆ. ಮಹಿಳೆಯನ್ನು ಶವ ಪೆಟ್ಟಿಗೆಯಲ್ಲಿ ಇರಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಶವ ಪೆಟ್ಟಿಗೆಯ ಬಾಗಿಲು ಬಡಿದ ಸದ್ದು ಕೇಳಿದೆ ಇದನ್ನು ಗಮನಿಸಿದ ಕುಟುಂಬ ಸದಸ್ಯರು ಶವ ಪೆಟ್ಟಿಗೆ ಬಾಗಿಲು ತೆರೆದಾಗ ಮೃತ ಮಹಿಳೆ ಜೀವಂತವಾಗಿ ಎದ್ದು ಕೂತಿದ್ದಾರೆ, ಇದನ್ನು ಕಂಡ ಕುಟುಂಬ ಸದಸ್ಯರಿಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ಇದು ಹೇಗೆ ಸಾಧ್ಯ ಎಂಬ ಆತಂಕ ಎದುರಾಗಿದೆ, ಕೂಡಲೆ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾಗ ಮಹಿಳೆ ಜೀವಂತವಾಗಿರುವುದು ದೃಢಪಟ್ಟಿದೆ.
ಮಹಿಳೆಯ ಅರೋಗ್ಯ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ಮತ್ತೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಆದರೆ ಮಹಿಳೆ ಜೂನ್ 16 ರಂದು ಮೃತಪಟ್ಟಿದ್ದು, ಇದನ್ನು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದು ಬಳಿಕ ಜೂನ್ 6 ರಂದು ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದ ಸ್ಥಳದಲ್ಲೇ ಮಹಿಳೆಯ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ತೀವ್ರ ನಿಗಾದಲ್ಲಿ ಏಳು ದಿನಗಳನ್ನು ಕಳೆದ ನಂತರ ಬೆಲ್ಲಾ ಮೊಂಟೊಯಾ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಈಕ್ವೆಡಾರ್ನ ಆರೋಗ್ಯ ಸಚಿವಾಲಯ ತಿಳಿಸಿದೆ.