ಮಹಿಳೆಯರಿಗೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ಅದರಿಂದ ಸೌಂದರ್ಯ ಕೂಡ ಹಾಳಾಗುತ್ತದೆ ಎಂದು ಹೇಳುತ್ತಾರೆ. ಮಹಿಳೆಯರು ಎಲ್ಲಾ ಆಯಾಮಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ದೂರ ಮಾಡಿಕೊಳ್ಳಲು ಬಾದಾಮಿ ಬೀಜಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ಬಾದಾಮಿ ಬೀಜಗಳ ಸೇವನೆಯಿಂದ ಈ ಕೆಳಗಿನ ಆರೋಗ್ಯ ಲಾಭಗಳು ಸಿಗುತ್ತವೆ.
ಬಾದಾಮಿ ಬೀಜಗಳಲ್ಲಿ ಆರೋಗ್ಯಕರ ಕೊಬ್ಬಿನ ಅಂಶಗಳು ಸಾಕಷ್ಟಿವೆ. ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಕೂಡ ಹೇರಳವಾಗಿದೆ. ಜೊತೆಗೆ ಮೆಗ್ನೀಷಿಯಮ್ ಎಂಬ ಖನಿಜಾಂಶ ಕೂಡ ಇರುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಕಾರ್ಟಿಸಲ್ ಎಂಬ ಒತ್ತಡದ ಹಾರ್ಮೋನ್ ಅನ್ನು ನಿಯಂತ್ರಣ ಮಾಡುತ್ತದೆ ಮತ್ತು ನಿದ್ರೆಯನ್ನು ಬೆಂಬಲಿಸುತ್ತದೆ.
ಬಾದಾಮಿ ಬೀಜಗಳಲ್ಲಿ ವಿಟಮಿನ್ ಇ ಪ್ರಮಾಣ ಹೆಚ್ಚಾಗಿರುವುದರಿಂದ ಜೀವಕೋಶಗಳ ಹಾನಿಯ ವಿರುದ್ಧ ಹೋರಾಡುತ್ತದೆ ಮತ್ತು ಋತು ಬಂಧದ ರೋಗಲಕ್ಷಣಗಳನ್ನು ದೂರ ಮಾಡುತ್ತದೆ.
ಬಾದಾಮಿ ಬೀಜಗಳಲ್ಲಿ ಪ್ರೋಟೀನ್ ಕೂಡ ಹೆಚ್ಚಾಗಿ ಸಿಗುವುದರಿಂದ ರಕ್ತದ ಶುಗರ್ ಲೆವೆಲ್ ಅನ್ನು ಸರಾಗವಾಗಿ ನಿರ್ವಹಿಸುತ್ತದೆ. ಮಹಿಳೆಯರು ಬಾದಾಮಿ ಬೀಜಗಳನ್ನು ಸ್ನಾಕ್ಸ್ ತರಹ ಸೇವಿಸಬಹುದು ಅಥವಾ ಆಲ್ಮಂಡ್ ಬಟರ್ ಟೋಸ್ಟ್ ರೂಪದಲ್ಲಿ ಕೂಡ ಸವಿಯಬಹುದು.
ವಯಸ್ಸಾದಂತೆ ಮಹಿಳೆಯರಿಗೆ ಮೂಳೆಗಳು ಸವೆಯುತ್ತವೆ ಅಥವಾ ದುರ್ಬಲವಾಗುತ್ತಾ ಹೋಗುತ್ತವೆ ಎಂದು ಹೇಳುತ್ತಾರೆ. ಆಸ್ತಿಯೋಪೋರೋಸಿಸ್ ಸಮಸ್ಯೆಯಿಂದ ಸಾಕಷ್ಟು ಮಹಿಳೆಯರು ಬಳಲುತ್ತಾರೆ.