ಭಾರತದ ಮೋಸ್ಟ್ ವಾಂಟೆಡ್ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಸದ್ಯ ಭಾರತದಿಂದ ಪರಾರಿಯಾಗಿ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅತಿಥಿಯಾಗಿ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಪಾಕಿಸ್ತಾನ ಸರ್ಕಾರ ಝಾಕಿರ್ ನಾಯ್ಕ್ನನ್ನು ಆಹ್ವಾನಿಸಿತ್ತು.ಕಳೆದ ಕೆಲ ದಿನಗಳಿಂದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಜಾಕಿರ್ ನಾಯ್ಕ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾನೆ.
ಮೂಲಭೂತವಾದಿ ವಿಚಾರಗಳನ್ನು ಮಂಡಿಸೋದು ಮಾತ್ರವಲ್ಲದೇ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆಯೂ ಕೀಳು ಮಟ್ಟದ ಹೇಳಿಕೆ ನೀಡಿ ವ್ಯಾಪಕ ಆಕ್ರೋಶಕ್ಕೆ ಜಾಕಿರ್ ನಾಯ್ಕ್ ಗುರಿಯಾಗುತ್ತಿದ್ದಾನೆ. ಈತನ್ಮಧ್ಯೆ ಮಹಿಳೆಯರ ಬಗ್ಗೆ ನೀಡಿರುವ ಝಾಕಿರ್ ನಾಯ್ಕ್ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಪಾಕಿಸ್ತಾನದಲ್ಲಿ ಇರುವ ಝಾಕಿರ್ ನಾಯ್ಕ್ ಅಲ್ಲಿನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾನೆ. ಮಹಿಳೆ ನಡೆಸುತ್ತಿದ್ದ ಸಂದರ್ಶನದಲ್ಲಿ ಝಾಕಿರ್ ನಾಯ್ಕ್ ಮಹಿಳೆಯರ ಬಗ್ಗೆಯೇ ತುಚ್ಛವಾಗಿ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿದೆ.
ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಪ್ರಧಾನಿ ಮತ್ತು ಸಿಎಂ ಆಗುವ ಬಗ್ಗೆ ಮಾತನಾಡಿದ ಜಾಕಿರ್ ನಾಯ್ಕ್, ‘ಮಹಿಳೆಯರು ಪ್ರಧಾನಿ ಅಥವಾ ಸಿಎಂ ಆಗಬಾರದು ಮತ್ತು ಇದು ಸಂಭವಿಸಿದರೆ ನನ್ನ ಪ್ರಕಾರ ಅವರ ತಲೆಗೆ ಮೊಳೆಯಿಂದ ಹೊಡೆಯಬೇಕು’ ಎಂದು ನಾಲಿಗೆ ಹರಿಬಿಟ್ಟಿದ್ದಾನೆ.
ಜಾಕಿರ್ ನಾಯ್ಕ್ ಹೇಳಿರುವ ಹೇಳಿಕೆ ವೈರಲ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ @pakistan_untold ಮೂಲಕ ಪೋಸ್ಟ್ ಮಾಡಲಾಗಿದೆ. ವೈರಲ್ ಕ್ಲಿಪ್ನಲ್ಲಿ ಮಾತನಾಡಿರುವ ಝಾಕಿರ್ ನಾಯ್ಕ್, ‘ನನಗೆ ಯಾವುದೇ ಮಹಿಳೆಯೊಂದಿಗೆ ದ್ವೇಷವಿಲ್ಲ, ಆದರೆ ಯಾವುದೇ ದೇಶದಲ್ಲಿ ಮಹಿಳೆಯರು ಮಾತ್ರ ಪ್ರಧಾನಿ ಅಥವಾ ಸಿಎಂ ಆಗಬಾರದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ಝಾಕಿರ್ ನಾಯ್ಕ್, ‘ಆ ದೇಶದ ವ್ಯಕ್ತಿ (ಪುರುಷ) ಸತ್ತಿದ್ದಾನೆಯೇ? ಅದಕ್ಕೇ ನನ್ನ ಪ್ರಕಾರ ಹೆಣ್ಣನ್ನು ಮುಟ್ಟುವುದಕ್ಕಿಂತ ಅವಳ ತಲೆಗೆ ಮೊಳೆಯನ್ನು ಹೊಡೆಯುವುದು ಸರಿ ಎಂದು ಹೇಳಿದ್ದಾನೆ. ಪಾಕಿಸ್ತಾನದ ಮಹಿಳೆಯರ ಬಗ್ಗೆ ಝಾಕಿರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆ ಹುಡುಗಿಯರನ್ನು ಸಾರ್ವಜನಿಕ ಆಸ್ತಿ ಎಂದು ಕರೆಯುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದ. ಇದೀಗ ಮತ್ತೊಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾನೆ.