ಮುಂದಿನ 30 ವರ್ಷಗಳಲ್ಲಿ ಭಾರತದ ಇಂಧನ ಬೇಡಿಕೆಯು ವಿಶ್ವದ ಎಲ್ಲ ದೇಶಗಳನ್ನು ಮೀರಿಸಿ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಹೀಗಾಗಿ ದೇಶವು ವಿಶ್ವಾಸಾರ್ಹ ಶಕ್ತಿಯ ಮೂಲ ಹೊಂದಿರುವುದು ಬಹಳ ಮುಖ್ಯವಾಗಿದೆ. ಭವಿಷ್ಯದಲ್ಲಿ ಕಲ್ಲಿದ್ದಲು ಮತ್ತು ಇತರ ಮೂಲಗಳನ್ನು ಅವಲಂಬಿಸಲು ಸಾಧ್ಯವಿಲ್ಲ ಎಂಬುದು ವಾಸ್ತವ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಸೌರ ಇಂಧನ ಉತ್ಪಾದನೆಯ ಸಾಮರ್ಥ್ಯವನ್ನು ವಿಸ್ತರಿಸಬೇಕಾಗಿದೆ.
ಕಲ್ಲಿದ್ದಲು ಉತ್ಪಾದನೆಯಲ್ಲಿ ಹೆಚ್ಚಳದ ಹೊರತಾಗಿಯೂ, 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸಲು ಭಾರತ ಬದ್ಧವಾಗಿದೆ. ಅಲ್ಲದೆ, 2030 ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಶೇಕಡಾ 50ರಷ್ಟು ವಿದ್ಯುತ್ ಉತ್ಪಾದನೆಯ ಗುರಿಯನ್ನು ದೇಶವು ಹೊಂದಿದೆ. ಇದರಲ್ಲಿ ಈಗಾಗಲೇ ಶೇ 43ರ ಗುರಿಯನ್ನು ತಲುಪಲಾಗಿದೆ. ಒಟ್ಟು ಸ್ಥಾಪಿತ ಸಾಮರ್ಥ್ಯಕ್ಕೆ ನವೀಕರಿಸಬಹುದಾದ ಇಂಧನಗಳು ಶೇ 30ರಷ್ಟು ಕೊಡುಗೆ ನೀಡುತ್ತಿವೆ.
ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಎಂಬ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಉಜ್ವಲ ಯೋಜನೆಯಂತಹ ಯೋಜನೆಯನ್ನು ಜಾರಿಗೊಳಿಸಿ 300 ರೂ.ಗಳ ಸಬ್ಸಿಡಿಯನ್ನು ನೀಡುತ್ತಿದೆ. ಹಾಗೆಯೇ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಇದೀಗ ಉಚಿತ ಸೌರ ಚುಲ್ಹಾ ಯೋಜನೆಯನ್ನು ಪ್ರಾರಂಭಿಸಿದ್ದು, ಉಚಿತವಾಗಿ ಸೌರ ಒಲೆಗಳನ್ನು ನೀಡಲಾಗುತ್ತದೆ. ಹಾಗದರೆ ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಸೌರ ಚುಲ್ಹಾ ಯೋಜನೆ:
ಈ ಯೋಜನೆಯೂ ಸೂರ್ಯನ ಬೆಳಕಿನಿಂದ ಸ್ಟೌವ್ ಗಳನ್ನು ಬಳಸಿಕೊಂಡು ಮನೆಯಲ್ಲಿ ಆಹಾರವನ್ನು ಸುಲಭವಾಗಿ ಮಾಡಬಹುದಾಗಿದೆ. ಈ ಸೌರ ಒಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಯಾರಿಸುತ್ತಿದ್ದು, ಇಲ್ಲಿಯವರೆಗೆ ಈ ಕಂಪನಿಯು ಸಿಂಗಲ್ ಬರ್ನರ್, ಡಬಲ್ ಬರ್ನರ್ ಕುಕ್ ಟಾಪ್ ಮತ್ತು ಡಬಲ್ ಬರ್ನರ್ ಹೈಬ್ರಿಡ್ ಕುಕ್ ಟಾಪ್ ಸೇರಿದಂತೆ ಮೂರು ರೀತಿಯ ಸೌರ ಒಲೆಗಳನ್ನು ತಯಾರಿಸಿದೆ ಎನ್ನಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಯಾವುದು?;
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಮೊಬೈಲ್ ಸಂಖ್ಯೆ
- ಫೋಟೋ
ಅರ್ಜಿ ಸಲ್ಲಿಕೆ ಹೇಗೆ?
- ಇಂಡಿಯನ್ ಆಯಿಲ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಮುಖಪುಟವನ್ನು ತೆರೆಯಬೇಕು. ಇದರ ನಂತರ, ನೀವು ನಿಮಗಾಗಿ ಇಂಡಿಯನ್ ಆಯಿಲ್ ಆಯ್ಕೆಗೆ ಹೋಗಿ.
- ಇಲ್ಲಿ ಭಾರತೀಯ ಸೌರ ಅಡುಗೆ ವ್ಯವಸ್ಥೆಯ ಆಯ್ಕೆಯನ್ನು ನೋಡುತ್ತೀರಿ, ಅದನ್ನು ಕ್ಲಿಕ್ ಮಾಡಿ.
- ಇಲ್ಲಿ ಅರ್ಜಿ ನಮೂನೆಯನ್ನು ಪಡೆಯುತ್ತೀರಿ. ಇದರ ನಂತರ, ಫಾರ್ಮ್ ನಲ್ಲಿ ಕೋರಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ನಂತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಿ ಫಾರ್ಮ್ ಅನ್ನು ಸಲ್ಲಿಸಿ.