ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯ ಲೈಂಗಿಕ ಬಯಕೆ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನಾವು ಮಾತ್ರವಲ್ಲ, ಅನೇಕ ಸಂಶೋಧನೆಗಳು ಸಹ ಇದನ್ನು ತೋರಿಸುತ್ತವೆ. ಇದು ಏಕೆ ಸಂಭವಿಸುತ್ತದೆ ಅನ್ನೋದರ ಬಗ್ಗೆ ತಿಳಿಯೋಣ.
ಋತುಚಕ್ರದ ಸಂದರ್ಭದಲ್ಲಿ ಅಂಡಾಶಯವು ಮೊಟ್ಟೆಯನ್ನು ಬಿಡುಗಡೆ ಮಾಡಲು ತಯಾರಾಗುವುದು ಮತ್ತು ಗರ್ಭಕೋಶದಲ್ಲಿ ಹೊಸ ಪದರವು ಬೆಳವಣಿಗೆ ಆಗುವುದು.
ಈ ಸಂದರ್ಭದಲ್ಲಿ ಲೈಂಗಿಕ ಬಯಕೆ ಹೆಚ್ಚಾಗುವುದು. ಅದೇ ರೀತಿಯಲ್ಲಿ ಅಂಡೋತ್ಪತ್ತಿ ಸಂಭವಿಸುವಂತಹ ಸಂದರ್ಭದಲ್ಲಿ ಕೂಡ ಮಹಿಳೆಯರಲ್ಲಿ ಬಯಕೆಯು ಇರುವುದು.
ಇದಕ್ಕೆ ಮಹಿಳೆಯರಲ್ಲಿ ಹಾರ್ಮೋನ್ ಗಳಾದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಕಾರಣ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಮಹಿಳೆಯರಲ್ಲಿ ಋತುಚಕ್ರದ ವೇಳೆ ಅತಿಯಾದ ಲೈಂಗಿಕ ಬಯಕೆಯು ಕಾಡುವುದು. ಹೀಗಾಗಿ ಸಂಗಾತಿ ಬಳಿಯಲ್ಲಿ ತಮ್ಮ ಬಯಕೆಯನ್ನು ಈಡೇರಿಸುವಂತೆ ಕೇಳಿಕೊಳ್ಳಬಹುದು. ಋತುಚಕ್ರದ ಫಾಲಿಕ್ಯೂಲರ್ ಹಂತದ ವೇಳೆ ಇದು ಅತಿಯಾಗಿ ಇರುವುದು.
ಇದಕ್ಕೆ ಕಾರಣವೆಂದರೆ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಮಟ್ಟವು ಕಡಿಮೆ ಇರುವುದು. ಇದು ಋತುಚಕ್ರ ಮುಗಿದ ಬಳಿಕವೂ ಹೀಗೆ ಮುಂದುವರಿಯುವುದು.
ಪ್ರೊಜೆಸ್ಟೆರಾನ್ ಅತಿಯಾಗಿದ್ದರೆ ಆಗ ಮಹಿಳೆಯರಲ್ಲಿ ಕಾಮಾಸಕ್ತಿಯು ಕಡಿಮೆ ಆಗುವುದು ಎಂದು ಹೇಳಲಾಗಿದೆ. ಹೀಗಾಗಿ ಇದು ಕಡಿಮೆ ಇದ್ದರೆ ಆಗ ಬಯಕೆಯು ಹೆಚ್ಚಾಗುತ್ತದೆ. ಫಾಲಿಕ್ಯೂಲರ್ ಹಂತದಲ್ಲಿ ಕೆಲವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ.
ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರಲ್ಲಿ ಪ್ರೊಜೆಸ್ಟೆರಾನ್ ಮಟ್ಟವು ಹೆಚ್ಚಾಗಿ ಇರುವ ಪರಿಣಾಮವಾಗಿ ಅವರಲ್ಲಿ ಲೈಂಗಿಕ ಬಯಕೆಯು ಕಡಿಮೆ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಆದರೆ ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.
ನೀವು ಋತುಚಕ್ರದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಬಯಸಿದರೆ ಆಗ ನೀವು ಕಾಂಡೋಮ್ ಧರಿಸಲು ಮರೆಯಬೇಡಿ.
ಯಾಕೆಂದರೆ ಈ ಸಂದರ್ಭದಲ್ಲಿ ಕೂಡ ಗರ್ಭಧರಿಸುವ ಸಾಧ್ಯತೆ ಇದೆ ಮತ್ತು ಲೈಂಗಿಕ ರೋಗಗಳು ಕೂಡ ಹರಡಬಹುದು.