ಮಂಡ್ಯ: ಅಂಬರೀಶ್ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ವಿರುದ್ಧ ಗರಂ ಆದ ಸಂಸದೆ ಸುಮಲತಾ(Sumalatha Ambareesh), ತುಂಬಾ ಹೇಸಿಗೆ ಅನಿಸುತ್ತೆ ಕುಮಾರಸ್ವಾಮಿ(Kumarswamy)ಯವರ ಈ ರೀತಿ ಮಾತುಗಳು. ಅಂಬರೀಶ್ ಅವರಿಗೆ ಗೌರವ ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲ. ರಾಜ್ಯದ ಜನತೆ ಅವರಿಗೆ ಗೌರವ ಸ್ಥಾನಮಾನ ಕೊಟ್ಟಿರುವುದು. ನಾನೇ ನಾನೇ ಎಂದು ಕುಮಾರಸ್ವಾಮಿ ಹೇಳೋದು ಅವರಿಗೆ ಶೋಭೆ ತರಲ್ಲ ಎಂದರು.
ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೇನೆ ಎಂದು ಈ ರೀತಿ ದ್ವೇಷ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದ್ವೇಷ ಮಾಡಿದ್ದು ನಾನಾ, ಅವರ ಎಂದು ಜನ ನೋಡಿಕೊಂಡು ಬಂದಿದ್ದಾರೆ. ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ. ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ. ಅಂಬರೀಶ್ ಹಾಗೂ ಅವರ ಕುಟುಂಬ ಪ್ರೀತಿಯಿಂದನೇ ಎಲ್ಲರನ್ನ ಗೆದ್ದಿರೋದು.
ಹಿಂದಿನ ರೆಕಾರ್ಡ್ ತೆಗೆದು ನೋಡಿಕೊಂಡು ಆಮೇಲೆ ಈ ರೀತಿ ಹೇಳಿಕೆ ನೀಡಲಿ. ಅಂಬರೀಶ್ ಅವರಿಂದ ಮಂಡ್ಯದಲ್ಲಿ ಜೆಡಿಎಸ್ 7ಕ್ಕೆ 7 ಸ್ಥಾನ ಗೆದ್ದಿತು ಎಂಬ ಸುಮಲತಾ ಹೇಳಿಕೆಯನ್ನ ಜೆಡಿಎಸ್ಸಿಗರು ಒಪ್ಪದ ವಿಚಾರ. ಅವ್ರು ಒಪ್ಪಿಕೊಳ್ಳೊಕೆ ಸಾಧ್ಯ ಇಲ್ಲಾ ಅವರ ಮನಸ್ಸನ್ನ ಅವರೇ ಕೇಳಿಕೊಳ್ಳಲಿ. ಒಪ್ಪಿಕೊಳ್ಳದೇ ಇರುವವರು ಅಂಬರೀಶ್ ಅವರನ್ನು ಸಂಪರ್ಕಿಸಲು ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದಾರೆ ಗೊತ್ತಿದೆ ಎಂದರು.