ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ಮೈಸೂರಿನಲ್ಲಿ ಗತ ವೈಭವ ಕಳೆಗಟ್ಟುತ್ತಿವೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಸಮಾರಂಭ ನಡೆಯಲಿದೆ. ಗಜಪಯಣ ಕಾರ್ಯಕ್ರಮದ ಮೂಲಕ ಕಾಡಿನಿಂಡ ನಾಡಿಗೆ ಗಜಪಡೆ ಆಗಮಿಸಿವೆ..
ವೀರನಹೊಸಹಳಗಳ್ಳಿಯಿಂದ ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಆಗಮಿಸಿವೆ. ಮೈಸೂರು- ಕೊಡಗು ಜಿಲ್ಲೆ ಗಡಿ ವೀರನಹೊಸಹಳ್ಳಿ ಬಳಿ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ದಸರಾ ಸಮಿತಿಯಿಂದ ಬರ ಮಾಡಿಕೊಳ್ಳಲಾಯಿತು.
ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ವಿಶೇಷ ಪೂಜೆಯನ್ನು ಸಚಿವರಾದ ಡಾ.ಮಹದೇವಪ್ಪ, ಈಶ್ವರ್ ಖಂಡ್ರೆ ಮತ್ತಿತರರು ಸಲ್ಲಿಸಿದರು. ಅಭಿಮನ್ಯು ನೇತೃತ್ವದಲ್ಲಿ ಒಟ್ಟು ಒಂಬತ್ತು ಆನೆಗಳು ಮೊದಲನೇ ತಂಡದಲ್ಲಿ ಮೈಸೂರು ಕಡೆಗೆ ಹೆಜ್ಜೆ ಹಾಕಿದವು, ದಸರಾ ಆನೆಗಳು ಹತ್ತು ತಿಂಗಳು ಕಾಡಿನಲ್ಲಿದ್ದರೆ. ಎರಡು ತಿಂಗಳು ಮೈಸೂರಿನಲ್ಲಿರಲಿವೆ. ಅವುಗಳಿಗೆ ವಿಶೇಷ ಆರೈಕೆಯನ್ನು ಈ ವೇಳೆ ಮಾಡಲಾಗುತ್ತದೆ.