ನವದೆಹಲಿ:- ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಇರೋ ನಗರಗಳ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲೇ 6ನೇ ಸ್ಥಾನದಲ್ಲಿದ್ದು, ದೇಶದಲ್ಲಿ ಮೊದಲನೇ ಸ್ಥಾನ ಪಡೆದಿದೆ.
ಈ ಪೈಕಿ ವಿಶ್ವದ ಟಾಪ್ 10 ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ 387 ನಗರಗಳ ಪಟ್ಟಿಯ ಟಾಪ್ 10ರಲ್ಲಿ ಭಾರತದ ಎರಡು ನಗರಗಳಾದ ಬೆಂಗಳೂರು ಹಾಗೂ ಮಹಾರಾಷ್ಟ್ರದ ಪುಣೆ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿವೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯು ಪಟ್ಟಿಯಲ್ಲಿ 44ನೇ ಸ್ಥಾನದಲ್ಲಿದೆ. ನಗರದಲ್ಲಿ ಸರಾಸರಿ ವೇಗ 18ಕಿ.ಮೀ.: ಬೆಂಗಳೂರು ನಗರದಲ್ಲಿ ಸಂಚರಿಸುವ ವಾಹನವೊಂದರ ಸರಾಸರಿ ವೇಗವು ಗಂಟೆಗೆ 18 ಕಿ.ಮೀ.ಗಳಾಗಿದೆ. ಅಲ್ಲದೇ ನಗರದಲ್ಲಿ 10 ಕಿ.ಮೀ. ಪ್ರಯಾಣಿಸಲು ಒಂದು ವಾಹನಕ್ಕೆ ಸರಾಸರಿ 28.10 ನಿಮಿಷಗಳ ಸಮಯ ಬೇಕಾಗುತ್ತದೆ ಎಂದು ವರದಿ ಹೇಳಿದೆ.
ವಿಶ್ವದಲ್ಲಿ ಲಂಡನ್ ನಂ.1: ಇನ್ನು ಸಮೀಕ್ಷೆ ವರದಿಯ ಪಟ್ಟಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳಲ್ಲಿ
ಬ್ರಿಟನ್ ರಾಜಧಾನಿ ಲಂಡನ್ 1, ಡಬ್ಲಿನ್ 2, ಟೊರೊಂಟೋ 3, ಮಿಲನ್ 4, ಲಿಮಾ 5, ಬೆಂಗಳೂರು 6, ಪುಣೆ 7ನೇ ಸ್ಥಾನದಲ್ಲಿದೆ.