ನವದೆಹಲಿ;- ವಿಶ್ವದ ಅತ್ಯಂತ ಹಿರಿಯ ನಾಯಿ ಬೋಬಿ ಇನ್ನಿಲ್ಲ. ವಿಶ್ವದ ಅತ್ಯಂತ ಹಿರಿಯ ನಾಯಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪೋರ್ಚುಗಲ್ನ ಬೋಬಿ ಮೃತಪಟ್ಟಿದೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪೋರ್ಚುಗಲ್ನ ಬೋಬಿ ಸೋಮವಾರ ಮೃತಪಟ್ಟಿದೆ ಎಂದು ಸಂತಾಪ ಸೂಚಿಸಿದೆ.
ಮೇ 11, 1992 ರಂದು ಜನಿಸಿದ ಬೋಬಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ 2023ರ ಫೆಬ್ರವರಿ ತಿಂಗಳಲ್ಲಿ ವಿಶ್ವದ ಅತ್ಯಂತ ಹಿರಿಯ ನಾಯಿ ಎಂದು ಗುರುತಿಸಿತ್ತು. ರಫೀರೊ ಡೊ ಅಲೆಂಟೆಜೊ ಥಳಿಯ ಬೋಬಿಗೆ 31 ವರ್ಷ 165 ದಿನಗಳಾಗಿದ್ದವು ಎಂದು ತಿಳಿದು ಬಂದಿದೆ.