ಕ್ಯಾಲಿಫೋರ್ನಿಯಾ: ತುಕ್ಕು ಹಿಡಿದು ಯಾವದಕ್ಕೂ ಬೇಡದ ಸ್ಥಿತಿಯಲ್ಲಿದ್ದ ಕಾರೊಂದು ಬರೋಬ್ಬರಿ ಬೆಲೆಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ. ಅಚ್ಚರಿ ಎನಿಸಿದರು ಇದು ಸತ್ಯ 1960ರಲ್ಲಿ ರೇಸೊಂದರಲ್ಲಿ ಭಾಗಿಯಾಗಿ ನಂತರ ಅಪಘಾತಕ್ಕೀಡಾಗಿ ತುಕ್ಕು ಹಿಡಿದ ಸ್ಥಿತಿಯಲ್ಲಿದ್ದ 1954ರಲ್ಲಿ ನಿರ್ಮಾಣವಾದ ಕಾರೊಂದು ಬರೋಬ್ಬರಿ ದಾಖಲೆಯ ಅಂದರೆ £ 1.5 ಮಿಲಿಯನ್ ಪೌಂಡ್ ಅಂದರೆ 15,88,38,060 ರೂಪಾಯಿಗೆ ಮಾರಾಟವಾಗಿದ್ದು, ಅಚ್ಚರಿ ಮೂಡಿಸಿದೆ.
ಪಿನಿನ್ ಫರೀನಾ ಕಾರು ಡಿಸೈನ್ ಸಂಸ್ಥೆಗೆ (ಪ್ರಸ್ತುತ ಈ ಸಂಸ್ಥೆ ಮಹೀಂದ್ರಾ ಗ್ರೂಪ್ ಮಾಲೀಕತ್ವದಲ್ಲಿದೆ) ಸೇರಿದ 500 ಮೊಂಡಿಯಲ್ ಸ್ಪೈಡರ್ ಸರಣಿ I ಕಾರು ಇದಾಗಿದ್ದು, ಪಿನಿನ್ ಫರೀನಾ ಸಂಸ್ಥೆಯ 13 ಕಾರುಗಳಲ್ಲಿ ಇದು ಒಂದಾಗಿತ್ತು. ಈ ಕಾರನ್ನು ಮಾಜಿ-ಸ್ಕುಡೆರಿಯಾ ಫೆರಾರಿ ತಂಡದ ಚಾಲಕ ಫ್ರಾಂಕೊ ಕೊರ್ಟೆಸ್ ಅವರು ವಿಶ್ವ ಪ್ರಸಿದ್ಧ ಕಾರು ರೇಸಾಗಿದ್ದ ಮಿಲ್ಲೆ ಮಿಗ್ಲಿಯಾದಲ್ಲಿ ಮುನ್ನಡೆಸಿದ್ದರು.